ಶತಾಯುಷಿ ಕುಜುಂಬ ಅಜಿಲ ನಿಧನ — ಗ್ರಾಮದಲ್ಲಿ ಸಂತಾಪ

ಕಡಬ, ಏಪ್ರಿಲ್:
ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ನಾಡೋಳಿ ನಿವಾಸಿಯಾದ ಶತಾಯುಷಿ ಕುಜುಂಬ ಅಜಿಲ (105) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ದೈವನರ್ತಕರಾಗಿ ಗುರುತಿಸಿಕೊಂಡಿದ್ದು, ತಮ್ಮ ಜೀವನವನ್ನು ಸಂಪ್ರದಾಯ ಹಾಗೂ ಸೇವೆಗೆ ಅರ್ಪಿಸಿಕೊಂಡಿದ್ದರು. ಶತಾಯುಷಿಯಾಗಿ ದೀರ್ಘಾಯುಷ್ಯ ಹೊಂದಿದ್ದ ಅವರು ಸ್ಥಳೀಯ ಸಮಾಜದಲ್ಲಿ ಗೌರವಾನ್ವಿತರಾಗಿದ್ದರು.

ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಬಳಗ ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!