ಉಡುಪಿ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕು ಹಾಗು ಹೆಚ್ಚು ಗ್ರಾಮೀಣ ಪ್ರದೇಶವನ್ನು ಹೊಂದಿರುವ ಬೈಂದೂರು ತಾಲೂಕು ಮೌನಕ್ರಾಂತಿಯೊಂದನ್ನು ಮಾಡಿದೆ. ಬೈಂದೂರು ತಾಲೂಕಿನ ಸರಕಾರಿ ಶಾಲೆಗೆ ಕೃತಕ ಬುದ್ದಿಮತ್ತೆಯ ಟೀಚರ್ ಬಂದಿದ್ದಾರೆ. ಈ ಕುರಿತ ಸ್ಟೋರಿ ಇದು…
ರಾಜ್ಯದ ಉಳಿದ ಶಾಲೆಗಳು ಮೂಗಿನ ಮೇಲೆ ಬೆರಳಿಡುವ ಕೆಲಸ ಬೈಂದೂರು ತಾಲೂಕು ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಹಾಗೂ ತಂತ್ರಜ್ಞಾನ ಆಧಾರಿತ ನವೀನ ಸಾಧನಗಳ ಮೂಲಕ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಬೈಂದೂರು ವಲಯದ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎ.ಐ. ಶಿಕ್ಷಕಿಯನ್ನು ನೇಮಿಸಿಕೊಂಡಿದೆ.
ರಾಜ್ಯದಲ್ಲೇ ಪ್ರಥಮ ಬಾರಿಗೆ ಸರಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಬೋಧನೆಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶಿಕ್ಷಕಿ ಐರಿಸ್ ನ್ನು ಪರಿಚಯಿಸಿರುವ ಈ ಶಾಲೆ ಹೊಸ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ…
ಆಧುನಿಕ ತಂತ್ರಜ್ಞಾನದ ಈ ಯುಗದ ಕೌತುಕ ಎಂದರೆ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ . ಅಂದರೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನ. ಅನೇಕ ಸಾಫ್ಟ್ವೇರ್ ದಿಗ್ಗಜ ಸಂಸ್ಥೆಗಳಲ್ಲಿ ಉದ್ಯೋಗ ನಷ್ಟ ಮತ್ತು ಉದ್ಯೋಗಿಗಳ ವಜಾಕ್ಕೆ ಕಾರಣವಾದ ತಂತ್ರ ಜ್ಞಾನವಿದು. ಈಗ ಎಲ್ಲಿ, ಯಾವ ಕ್ಷೇತ್ರ ನೋಡಿದರೂ ಏಐ ಪ್ರಭಾವ ಸದ್ದು ಮಾಡುತ್ತಿದೆ. ಶಿಕ್ಷಣ ಕ್ಷೇತ್ರ ಕೂಡಾ ಇದಕ್ಕೆ ಹೊರತಾಗಿಲ್ಲ, ಇದಕ್ಕೆ ಉದಾಹರಣೆಯಾಗಲು ಹೊರಟಿದೆ ಬೈಂದೂರು ಶೈಕ್ಷಣಿಕ ವಲಯ ವ್ಯಾಪ್ತಿಗೆ ಸೇರಿದ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ .
ಈ ಶಾಲೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಶಿಕ್ಷಕಿ ‘ಐರಿಸ್’ ಅನ್ನು ವಿಧ್ಯುಕ್ತವಾಗಿ ಪರಿಚಯಿಸಲಾಗಿದ್ದು, 2026-27ನೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ನೇರ ಬೋಧನೆ ಆರಂಭಿಸುವ ನಿರೀಕ್ಷೆಯಿದೆ. ಈಗಾಗಲೇ ಐರಿಸ್ನ್ನು ಕಾರ್ಯನಿರ್ವಹಣೆಗೆ ಸಜ್ಜುಗೊಳಿಸುವ ತರಬೇತಿ ಹಾಗೂ ತಾಂತ್ರಿಕ ವ್ಯವಸ್ಥೆಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ಐರಿಸ್ ಎಐ ಶಿಕ್ಷಕಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಾದ ನಡೆಸುವ ಸಾಮರ್ಥ್ಯ ಹೊಂದಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುವ ಮೂಲಕ ವೈಯಕ್ತಿಕ ಕಲಿಕೆಯ ಅನುಭವವನ್ನು ಒದಗಿಸುತ್ತದೆ.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಐರಿಸ್, ಕೈಕುಲುಕಿ ಮಾತನಾಡುವಂತಹ ವೈಶಿಷ್ಟ್ಯಗಳಿಂದ ಮಕ್ಕಳ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಇಂಗ್ಲಿಷ್ ಭಾಷಾ ಕಲಿಕೆಗೆ ಇದು ಹೆಚ್ಚಿನ ನೆರವಾಗಲಿದೆ
ಫ್ಲೋ..
ವಾಯ್ಸ್ ೨; ನೀತಿ ಆಯೋಗದ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿ ರೂಪುಗೊಂಡಿರುವ ಈ ಎಐ ಶಿಕ್ಷಕಿಯನ್ನು ಮೇಕರ್ ಲ್ಯಾಬ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೇರಳ ರಾಜ್ಯದ ತಿರುವನಂತಪುರದಲ್ಲಿರುವ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ತಂತ್ರಜ್ಞಾನವನ್ನು ಮೊದಲಿಗೆ ಪರಿಚಯಿಸಲಾಗಿದ್ದು, ಇದೀಗ ವಂಡ್ಸೆ ಶಾಲೆಯು ಅದನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. 111 ವರ್ಷಗಳ ಇತಿಹಾಸ ಹೊಂದಿರುವ ವಂಡ್ಸೆ ಶಾಲೆ, ಹೊಸತನ ಮತ್ತು ಪ್ರಯೋಗಶೀಲತೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. 2015ರಲ್ಲಿ ಕೇವಲ 89 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಇದೀಗ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 12 ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳು, ಶಾಲಾ ವಾಹನ ವ್ಯವಸ್ಥೆ ಹಾಗೂ ಗುಣಮಟ್ಟದ ಶಿಕ್ಷಣದೊಂದಿಗೆ ಶಾಲೆ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ.
ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಮಾರ್ಗದರ್ಶನದಲ್ಲಿ ಎಸ್ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕರ ಸಹಕಾರದಿಂದ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಜಿಲ್ಲೆಯಲ್ಲೇ ಮೊದಲ ಬಾರಿಗೆ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಿದ ಹೆಗ್ಗಳಿಕೆಯನ್ನು ಈ ಶಾಲೆ ಪಡೆದಿದೆ. ಈಗ ಎಐ ಶಿಕ್ಷಕಿಯ ಅಳವಡಿಕೆಯಿಂದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನಾಧಾರಿತ, ವಿನೂತನ ಮತ್ತು ಪರಿಣಾಮಕಾರಿ ಶಿಕ್ಷಣ ಲಭ್ಯವಾಗಲಿದ್ದು, ಭವಿಷ್ಯದ ಶಿಕ್ಷಣ ಮಾದರಿಗೆ ಇದು ಹೊಸ ದಿಕ್ಕು ತೋರಿಸಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ತಿಳಿಸಿದ್ದಾರೆ.
ಬೈಟ್ : ಉದಯಕುಮಾರ್ ಶೆಟ್ಟಿ ( ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ)
ವಾಯ್ಸ್ 3: ಒಟ್ಟಿನಲ್ಲಿ, ವಂಡ್ಸೆ ಸರಕಾರಿ ಶಾಲೆಯ ಈ ನವೀನ ಪ್ರಯತ್ನವು ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯ ಹೊಸ ದಿಕ್ಕನ್ನು ತೋರಿಸುವುದರೊಂದಿಗೆ, ಗ್ರಾಮೀಣ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.