ವಿಷು ಕಣಿಯ ದರ್ಶನ ಪಡೆದ ಭಕ್ತರು: ಶ್ರೀ ಮುತ್ತಪ್ಪನ್ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಂಗಳೂರು: ವಿಷು ಹಬ್ಬವು ದಕ್ಷಿಣ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದು .ಈ ಹಬ್ಬವನ್ನು ಕೇರಳ ಮತ್ತು ತುಳುನಾಡಿನ ಭಾಗದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತದೆ.

ವಿಷು ಹಬ್ಬದ ಪ್ರಮುಖ ವಿಶೇಷವೆಂದರೆ ವಿಷು ಕಣಿ. ಬೆಳಿಗ್ಗೆ ಎದ್ದ ತಕ್ಷಣ ದೇವರ ಮುಂದೆ ಇಡಲಾಗಿರುವ ಹಣ್ಣುಗಳು, ಹೂವುಗಳು, ಕನ್ನಡಿ, ನಾಣ್ಯಗಳು ಮತ್ತು ಶ್ರೀಕೃಷ್ಣನ ಮೂರ್ತಿಯನ್ನು ನೋಡುವುದು ಶುಭಕರವೆಂದು ನಂಬಲಾಗುತ್ತದೆ. ಈ ಸಂಪ್ರದಾಯವು ಮುಂದಿನ ವರ್ಷದ ಜೀವನ ಸಮೃದ್ಧಿಯಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತದೆ.

ಹಬ್ಬದ ಸಂದರ್ಭದಲ್ಲಿ ಹಿರಿಯರು ಕಿರಿಯರಿಗೆ ವಿಷುಕೈನೀಟಂ ಎಂಬ ಹೆಸರಿನಲ್ಲಿ ಹಣ ಅಥವಾ ಉಡುಗೊರೆಗಳನ್ನು ನೀಡುತ್ತಾರೆ. ಮನೆಗಳಲ್ಲಿ ರುಚಿಕರವಾದ ಬೋಜನ ತಯಾರಿಸಿ ಕುಟುಂಬದವರು ಒಟ್ಟಿಗೆ ಹರ್ಷದಿಂದ ಆಚರಿಸುತ್ತಾರೆ

ತುಳುನಾಡಿನಲ್ಲಿ ಸೌರಮಾನ ಯುಗಾದಿಗೆ ಅದರದ್ದೇ ಆದ ಹಿನ್ನೆಲೆಯಿದೆ. ತುಳುವರು ಬಿಷು ಹಬ್ಬವನ್ನು ವರ್ಷದ ಮೊದಲ ಹಬ್ಬವನ್ನಾಗಿ ಆಚರಿಸುವ ಪದ್ದತಿ ಇದೆ. ಸೌರಮಾನ ಪಂಚಾಂಗವನ್ನು ಅನುಸರಿಸುವವರು ಈ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತಾನೆ ಈ ಕ್ಷಣವನ್ನು ಹೊಸ ವರ್ಷವನ್ನಾಗಿ ಆಚರಿಸುವುದು ವಾಡಿಕೆ .

ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿರುವ ಶ್ರೀ ಮುತ್ತಪ್ಪನ್ ದೇವಸ್ಥಾನದಲ್ಲಿ ವಿಷು ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತ್ತು. ಈ ಸಂದರ್ಭದಲ್ಲಿ ಅನೇಕ ಮಂದಿ ಭಕ್ತರು ಶ್ರೀ ದೈವದ ಗರ್ಭ ಗುಡಿಯಲ್ಲಿ ಇಟ್ಟ ಕಣಿಕೊನ್ನೆ , ಫಲ ಪುಷ್ಪ , ಉಣ್ಣಿಯಪ್ಪ ಒಳಗೊಂಡ ವಿಷು ಕಣಿಯ ದರ್ಶನ ಪಡೆದು ಪುನೀತರಾದರು. ಬಂದ ಭಕ್ತರಿಗೆ ಉಣ್ಣಿಯಪ್ಪ ಮತ್ತು ವಿಷುಕೈನೀಟಂ ದೊರೆಯಿತು .

SHARE
Loading spinner

Leave a Reply

Your email address will not be published. Required fields are marked *

error: Content is protected !!