ಮಂಗಳೂರಿನಲ್ಲಿ ಬಜರಂಗದಳ ಸಂಯೋಜಕರ ಸಮಾವೇಶಕ್ಕೆ ಚಾಲನೆ: ಸಂಘನಿಕೇತನದಲ್ಲಿ ಎರಡು ದಿನಗಳ ಕಾರ್ಯಕ್ರಮ

ಮಂಗಳೂರು: ಬಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕರ ಸಮಾವೇಶ ಮಂಗಳೂರಿನ ಸಂಘನಿಕೇತನ ನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿದ್ದು, ಶನಿವಾರ ಅದಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಗೋಪೂಜೆ ಹಾಗೂ ಧ್ವಜಾರೋಹಣದ ಮೂಲಕ ಸಮಾವೇಶವನ್ನು ವಿಧಿವತ್ತಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಜರಂಗದಳ ಸಂಯೋಜಕ ಕಿಶನ್ ಪ್ರಜಾಪತ್ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸ್ಥಾಣು ಮಾಲಯನ್ ಜೀ, ಡಾ ಎಂ ಬಿ ಪುರಾಣಿಕ್, ಸುರೇಶ್ ಬಿ ಇ, ಶರಣ್ ಪಂಪುವೆಲ್ ಹಾಗೂ ಪ್ರಭಂಜನ್ ಸೂರ್ಯ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಂಯೋಜಕರು ಸಮಾವೇಶದಲ್ಲಿ ಭಾಗವಹಿಸಿದ್ದು, ಸಂಘಟನೆಯ ಮುಂದಿನ ಕಾರ್ಯಯೋಜನೆ ಹಾಗೂ ಸಂಘಟನಾ ಬಲವರ್ಧನೆ ಕುರಿತಂತೆ ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!