ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ನಾಯಕತ್ವ ಪೈಪೋಟಿ: ಸಿಎಂ ಹಂಚಿಕೆ ಚರ್ಚೆಗೆ ಹೊಸ ತಿರುವು

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ನಾಯಕತ್ವದ ಪೈಪೋಟಿ ತೀವ್ರಗೊಂಡಿದೆ. ಮುಖ್ಯಮಂತ್ರಿ Siddaramaiah ಅವರು ಮೂರು ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಸಿಎಂ ಸ್ಥಾನ ಹಂಚಿಕೆ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಉಪಮುಖ್ಯಮಂತ್ರಿ ಡಿ . ಕೆ . ಶಿವಕುಮಾರ್ ಬಣದಿಂದ ಹಂಚಿಕೆ ಬೇಡಿಕೆ ಕೇಳಿಬರುತ್ತಿದ್ದರೆ, ಸಿದ್ದರಾಮಯ್ಯ ಬೆಂಬಲಿಗರು ಸಿಎಂ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ದಲಿತ ಮುಖ್ಯಮಂತ್ರಿ ಅಸ್ತ್ರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಹೊಸ ಷರತ್ತು ಇಟ್ಟಿದ್ದಾರೆ ಎನ್ನಲಾಗುತ್ತಿದ್ದು, ತಾವು ಸ್ಥಾನ ತ್ಯಜಿಸಬೇಕಾದರೆ ಮುಂದಿನ ಸಿಎಂ ಆಗಿ ಜಿ . ಪರಮೇಶ್ವರ ಅವರನ್ನು ನೇಮಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ.

ದಲಿತ ನಾಯಕತ್ವದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವಿರೋಧಿ ಬಣಕ್ಕೆ ಚೆಕ್ ನೀಡಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದೇ ವೇಳೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವೆ ಗುಪ್ತ ಒಪ್ಪಂದವೊಂದು ನಡೆದಿದೆ ಎಂಬ ಊಹಾಪೋಹಗಳೂ ಹರಿದಾಡುತ್ತಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚಿಸಿದರೆ ತಾವು ಸ್ಥಾನ ತ್ಯಜಿಸಲು ಸಿದ್ಧ ಎನ್ನುವ ಸಂದೇಶವನ್ನೂ ಸಿದ್ದರಾಮಯ್ಯ ರವಾನಿಸಿರುವುದಾಗಿ ತಿಳಿದುಬಂದಿದೆ. ಆದರೆ ತಮ್ಮ ನಂತರ ಪರಮೇಶ್ವರ್ ಅವರನ್ನು ಕೂರಿಸುವುದರ ಮೇಲೆ ಅವರು ಪಟ್ಟು ಹಿಡಿದಿರುವುದು ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ, ರಾಜ್ಯ ಕಾಂಗ್ರೆಸ್‌ನ ನಾಯಕತ್ವ ಬದಲಾವಣೆ ಚರ್ಚೆಗಳು ಇದೀಗ ವೈಯಕ್ತಿಕ ಪೈಪೋಟಿಯನ್ನು ಮೀರಿ ಜಾತಿ ಸಮೀಕರಣದ ರಾಜಕೀಯದತ್ತ ತಿರುಗಿರುವುದು ಗಮನಾರ್ಹವಾಗಿ

SHARE
Loading spinner

Leave a Reply

Your email address will not be published. Required fields are marked *

error: Content is protected !!