ಉಳ್ಳಾಲ,ಕರ್ನಾಟಕ ಸಲಫಿ ಎಸೋಸಿಯೇಷನ್ (ರಿ), ಮಂಗಳೂರು ಮತ್ತು ವಿಶ್ವಮ್ ಇಸ್ಲಾಮಿಕ್ ಆರ್ಗನೈಝೇಷನ್ ಇವುಗಳ ಜಂಟಿ ಆಶ್ರಯದಲ್ಲಿ ತಲಪಾಡಿ, ಕೆ ಸಿ ನಗರದಲ್ಲಿ “ತೌಹೀದ್ ಇಸ್ಲಾಮಿನ ಬುನಾದಿ; ಇದು ಪ್ರವಾದಿ ಗಳ ಹಾವಿ” ಎಂಬ ಮಹತ್ವದ ಧೈಯ ವಾಕ್ಯದೊಂದಿಗೆ ಸಲಫಿ ಸಮ್ಮೇಳನವು 2026ರ ಮೇ 3 ರಂದು ಭಾನುವಾರ ಸಂಜೆ 4 ಗಂಟೆಗೆ ತಲಪಾಡಿಯ ಕೆ ಸಿ ನಗರದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಲಫಿ ಎಸೋಸಿಯೇಷನ್ ನ ಅಧ್ಯಕ್ಷ ಡಾ.ಮುಹಮ್ಮದ್ ಹಫೀಝ್ ಹೇಳಿದರು.
ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಸಮ್ಮೇಳನದಲ್ಲಿ ಮುಖ್ಯ ಭಾಷಣವನ್ನು ಹುಸೈನ್ ಸಲಫಿ ಶಾರ್ಜಾ ನೀಡಲಿದ್ದಾರೆ. ಪಿ ಎನ್ ಅಬ್ದುಲ್ ಲತೀಫ್ ಮದನಿ, ಸರ್ಫ್ ರಾಝ್ ಫೈಝಿ, ಸಿ ಪಿ ಸಲೀಮ್, ಡಾ.ಹಫೀಝ್ ಸ್ವಲಾಹಿ, ಯಾಸಿರ್ ಅಲ್ ಹಿಕಮಿ, ನಝೀರ್ ಸಲಫಿ, ಇಜಾಝ್ ಸ್ವಲಾಹಿ, ಖಲೀಲ್ ತಲಪಾಡಿ ಮತ್ತು ಅಬ್ದುಲ್ಲ ಫರ್ಹಾನ್ ರವರು ವಿವಿಧ ವಿಷಯಗಳ ಕುರಿತು ಉಪನ್ಯಾಸಗಳ ನ್ನು ನೀಡಲಿದ್ದಾರೆ.ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ಡಾ. ಯು.ಟಿ ಖಾದರ್ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಸಮ್ಮೇಳನದ ಭಾಗವಾಗಿ ಈಗಾಗಲೇ ವಿವಿಧ ಪ್ರದೇಶಗಳಲ್ಲಿ ನೆರೆಹೊರೆ ಸಂಗಮಗಳು ಯಶಸ್ವಿಯಾಗಿ ಜರುಗಿದ್ದು, ಸಮಾಜದಲ್ಲಿ ಹೆಚ್ಚುತ್ತಿರುವ ಪಿಡುಗುಗಳಾದ ಮಾದಕದ್ರವ್ಯ, ಮಹಿಳಾ ದೌರ್ಜನ್ಯ, ವರದಕ್ಷಿಣೆ, ದುಂದುವೆಚ್ಚ ಇತ್ಯಾದಿಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಬೀದಿ, ಬೀದಿಗಳಲ್ಲಿ ಜನ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ.ಜನರಲ್ಲಿ ತೌಹೀದ್’ನ ಕುರಿತು ಸರಿಯಾದ ಅರಿವು ಮೂಡಿಸುವುದು ಮತ್ತು ಮೂಢನಂಬಿಕೆಗಳ ವಿರುದ್ಧ ಸ್ಪಷ್ಟ ಸಂದೇಶ ಸಾರುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು
ಈ ಸಮ್ಮೇಳನವು ಸಮುದಾಯದಲ್ಲಿ ಧಾರ್ಮಿಕ ಜಾಗೃತಿ, ನೈತಿಕ ಮೌಲ್ಯಗಳ ಬಲಪಡಿಸುವಿಕೆ ಹಾಗೂ ಸಾಮಾಜಿಕ ಏಕತೆ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುವ ಉದ್ದೇಶವನ್ನೂ ಹೊಂದಿದೆ ಎಂದರು.ಸುದ್ದಿ ಗೋಷ್ಠಿ ಯಲ್ಲಿಕರ್ನಾಟಕ ಸಲಫಿ ಎಸೋಸಿಯೇಷನ್ ನ ಕಾರ್ಯ ದರ್ಶಿ ಖಲೀಲ್ ತಲಪಾಡಿ, ಪ್ರಧಾನ ಕಾರ್ಯದರ್ಶಿ ಯಾಸೀರ್ ಅಲ್ ಹಿಕಮಿ, ಕೋಶಾಧಿಕಾರಿ ಸೈಯ್ಯದ್ ಸಾಝ್, ಉಪಾಧ್ಯಕ್ಷ ಫಿರೋಝ್ ಉಳ್ಳಾಲ, ಸ್ಟೂಡೆಂಟ್ ವಿಂಗ್ ಕಾರ್ಯದರ್ಶಿ ರಝೀನ್ ಉಪಸ್ಥಿತರಿದ್ದರು.