ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಅಪಪ್ರಚಾರ: ಕಾಂಗ್ರೆಸ್ ಆರೋಪ

ಮಹಿಳಾ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದೆ, ಮಹಿಳೆಯರ ಪರವಾಗಿ ಪಕ್ಷವಿದ್ದು, ವಿರೋಧಿಯಾಗಲು ಸಾಧ್ಯವೇ ಇಲ್ಲ ಎಂದು ದ.ಕ.ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಹಮ್ಮದ್ ಆಲಿ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್, ಮಣಿಪುರ ಸಹಿತ ನಾನಾ ಕಡೆಗಳಲ್ಲಿ ಮಹಿಳೆಯರಿಗೆ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಆರೋಪಿಗಳ ಕೃತ್ಯ ಖಂಡಿಸುವ ಪ್ರಯತ್ನವನ್ನು ಬಿಜೆಪಿ ಮಾಡಿರಲಿಲ್ಲ ಎಂದರು.


ಬಿಜೆಪಿಗೆ ಮಹಿಳೆಯರ ಕುರಿತು ಎಳ್ಳಷ್ಟೂ ಗೌರವವಿಲ್ಲ ಆದರೆ ಕಾಂಗ್ರೆಸ್ ಸದಾ ಕಾಲ ಮಹಿಳೆಯರ ಪರ ಇತ್ತು ಎಂದ ಅ ಅವರು, ಕಾಂಗ್ರೆಸ್ ಮಸೂದೆ ಮಂಡಿಸಿದಾಗ ಅಡ್ಡಿಪಡಿಸಲಾಯಿತು, 2023ರಲ್ಲಿ ಮೋದಿ ಸರಕಾರ ನಾರಿಶಕ್ತಿ ವಂದನ್ ಅಧಿನಿಯಮ ಜಾರಿಗೊಳಿಸಿದಾಗ ಕಾಂಗ್ರೆಸ್ ಬೆಂಬಲಿಸಿತ್ತು, ಇದನ್ನೇ ಎರಡು ವರ್ಷದ ಬಳಿಕ ಪುನರ್ ಮಂಡನೆ ಮಾಡಿ, ಕ್ಷೇತ್ರ ಪುನರ್ವಿಂಗಡಣೆ ಮಾಡುವ ಹುನ್ನಾರವಾಗಿದ್ದ ಕಾರಣ ಮಸೂದೆ ಬಿದ್ದು ಹೋಯಿತು ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಬಂಟ್ವಾಳ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಬಂಟ್ವಾಳ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಲಾದ್ರು ಮಿನೇಜಸ್, ಪಾಣೆಮಂಗಳೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಎ.ಬಿ.ಅಬ್ದುಲ್ಲಾ ಕೊಳ್ನಾಡು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!