ನಿಲಂಬೂರ್ ಉಪ ಚುನಾವಣೆ : ಮತದಾನ ಪೂರ್ಣ. ಶೇ. 72ರಷ್ಟು ಮತದಾರರು ಹಕ್ಕು ಚಲಾವಣೆ.ಮತಏಣಿಕೆ 23 ರಂದು

ತಿರುವನಂತಪುರಂ :ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಯ ಸೆಮಿಫೈನಲ್ ಎಂದೇ ಬಿಂಬಿತ ವಾಗಿ ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ನಿಲಂಬೂರ್ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಅಂತೂ ಇಂತೂ ಪೂರ್ತಿ ಗೊಂಡಿದ್ದು ಶೇ. 72 ರಷ್ಟು ಮತದಾರರು ತನ್ನ ಹಕ್ಕು ಪ್ರತಿಪಾದಿಸಿದ್ದಾರೆ.

ಇಷ್ಟು ಸಂಖ್ಯೆ ಯಲ್ಲಿ ಮತದಾನ ವಾಗಿರುವುದು ನಮಗೆ ಗೆಲುವು ಖಚಿತ ವೆಂದು ಎಲ್ಲಾ ಅಭ್ಯರ್ಥಿ ಗಳ ನಂಬಿಕೆ ಯಾಗಿದೆ.ಯು ಡಿ ಎಫ್ ನಿಂದ ಆರ್ಯಾಡನ್ ಸೌಕತ್ ಎಲ್ ಡಿ ಎಫ್ ನಿಂದ ಎಂ ಸ್ವರಾಜ್ ಎನ್ ಡಿ ಎ ಯಿಂದ ಮೋಹನ್ ಜೋರ್ಜ್ ಹಾಗೂ ಸ್ವತಂತ್ರ ಅಭ್ಯರ್ಥಿ ಯಾಗಿ ಪಿ ವಿ ಅನ್ವರ್ ನಾಮಪತ್ರ ಸಲ್ಲಿಸಿ ತನ್ನ ರಾಜಕೀಯ ಭವಿಷ್ಯ ವನ್ನು ಪರೀಕ್ಷಿಸಲಿದ್ದಾರೆ. ನಾಮಪತ್ರ ಸೂಕ್ಷ್ಮ ಪರಿಶೀಲನೆಯ ನಂತರ ಇಲ್ಲಿ ಒಟ್ಟು 14 ಸ್ಪರ್ಧಿಗಳು ಇದ್ದರೂ ಪ್ರಮುಖ ಸ್ಪರ್ಧೆ ಈ ನಾಲ್ವರೊಳಗೆ ನಡೆಯಲಿದೆ.


ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಎಡರಂಗ ದಿಂದ ಆಯ್ಕೆಯಾದ ಅನ್ವರ್ ಮುಖ್ಯಮಂತ್ರಿ ಹಾಗೂ ಎಡರಂಗದ ಬಗ್ಗೆ ಬಹಿರಂಗ ಟೀಕೆ ಮಾಡಿ ಗೃಹ ಇಲಾಖೆಯ ಉನ್ನತ ಅಧಿಕಾರಿಗಳ ನೇಮಕದ ಬಗ್ಗೆ ಸರಕಾರವನ್ನು ತರಾಟೆಗೆ ತೆಗೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ತೆರವಾದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.

ಎಲ್ ಡಿ ಎಫ್ ನಿಂದ ಕುಪಿತಗೊಂಡು ಹೊರಬಂದ ಅನ್ವರ್ ಯು ಡಿ ಎಫ್ ತೆಕ್ಕೆಗೆ ಬರುತ್ತಾರೆಂದು ಕುತೂಹಲ ಗರಿಗೆದರಿರುವಾಗಲೇ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಹಾಗೂ ಕೆಲ ಕಾಂಗ್ರೆಸ್ ನಾಯಕರ ಬಗ್ಗೆ ಟೀಕಾ ಪ್ರಕಾರ ಗೈದರು .ಯು ಡಿ ಎಫ್ ಗೆ ಬರುವ ವಿಚಾರದಲ್ಲಿ ಅನ್ವರ್ ಗೆ ಬಾಗಿಲು ಮುಚ್ಚಿದೆ ಎಂಬ ಹೇಳಿಕೆ ನೀಡಿದ ವಿ ಡಿ ಸತೀಶನ್ ರಿಗೆ ಸ್ವ ಪಕ್ಷಿಯರ ವಿರೋಧವನ್ನು ಎದುರಿಸಬೇಕಾಯಿತು.ಅಂತಿಮವಾಗಿ ಅತ್ತ ಯು ಡಿ ಎಫ್ ಇಲ್ಲ ಇತ್ತ ಎಲ್ ಡಿ ಎಫ್ ಇಲ್ಲದೆ ಕೊನೆಗೆ ತೃಣಮೂಲ ಕಾಂಗ್ರೆಸ್ ನ ಎರಡು ಎಲೆಗೆ ಶರಣಾಗಿ ಅದೇ ಪಕ್ಷದಿಂದ ಸ್ಪರ್ದಿಸಲು ನಿರ್ಧರಿಸಿದರು. ಆದರೆ ನಾಮಪತ್ರ ಸೂಕ್ಷ್ಮ ಪರಿಶೀಲನೆಯ ಸಂದರ್ಭದಲ್ಲಿ ಕೇರಳ ದಲ್ಲಿ ತ್ರ್ ಣ ಮೂಲ ಕಾಂಗ್ರೆಸ್ ನೋಂದಾವಣೆ ಆಗದ ಕಾರಣ ನಾಮಪತ್ರ ತಿರಸ್ಕಾರಗೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ.


ಬಿ ಜೆ ಪಿ ಇಲ್ಲಿ ಸ್ಪರ್ಧೆಗೆ ಇಲ್ಲವೆಂದು ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮೊದಲು ಹೇಳಿಕೆ ನೀಡಿದರೂ ಮುಂಬರುವ ಸ್ಥಳೀಯಾಡಳಿತ ಹಾಗೂ ವಿಧಾನ ಸಭಾ ಚುನಾವಣೆಯ ಹಿತ ದೃಷ್ಟಿಯಿಂದ ಅಂತಿಮವಾಗಿ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿತು.ಈ ಮದ್ಯೆ ಬಿ ಜೆ ಡಿ ಎಸ್ ಅಭ್ಯರ್ಥಿಯನ್ನು ಹಾಕುವ ಬಗ್ಗೆ ಪಕ್ಷದ ನಾಯಕ ತುಷಾರ್ ವೆಳ್ಳಪಲ್ಲಿ ಒಲವು ವ್ಯಕ್ತಪಡಿಸಿದ್ದರೂ ಕೊನೆಗೆ ಎನ್ ಡಿ ಎ ಅಭ್ಯರ್ಥಿಯಾದ ಮೋಹನ್ ಜೋರ್ಜ್ ರಿಗೆ ಬೆಂಬಲ ನೀಡಲು ನಿರ್ಧರಿಸಿತು.


ಯು ಡಿ ಎಫ್ ಚುನಾವಣೆಗೆ ದಿನ ನಿರ್ಣಯಕ್ಕೆ ಮೊದಲೇ ಅಭ್ಯರ್ಥಿಯನ್ನು ಪ್ರಚಾರ ಕಾರ್ಯದಲ್ಲಿ ಮುಂಚೂಣಿಯಲ್ಲಿತ್ತು.ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಾಡಾಗಿರುವ ಇಲ್ಲಿ ಗೆಲುವು ಎಲ್ಲಾ ಅಭ್ಯರ್ಥಿಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ವಿಜಯದ ಮಾಲೆ ಯಾರ ಕೊರಳಿಗೆ ಎಂದು ತಿಳಿಯಲು ಜೂನ್ 23ರ ವರೆಗೆ ಕಾಯಲೇ ಬೇಕು.

SHARE
Loading spinner

Leave a Reply

Your email address will not be published. Required fields are marked *

error: Content is protected !!