ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಯೂನಿವರ್ಸಿಟಿ ಕಾಲೇಜು ಮಂಗಳೂರು ನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಬಿಎ ಇಂಗ್ಲಿಷ್ ಐಚ್ಛಿಕ (English Optional) ಕೋರ್ಸ್ಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.
ಎನ್ಎಎಸಿ ‘ಎ’ ಗ್ರೇಡ್ ಮಾನ್ಯತೆ ಹಾಗೂ “College with Potential for Excellence” ಗೌರವ ಪಡೆದಿರುವ ಕಾಲೇಜು, ವಿದ್ಯಾರ್ಥಿಗಳಿಗೆ ಭಾಷೆ, ಸಾಹಿತ್ಯ ಹಾಗೂ ಸಂವಹನ ಕೌಶಲ್ಯಗಳನ್ನು ಬೆಳೆಸುವ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.
ಕಾಲೇಜಿನಲ್ಲಿ ಬಿಎ ವಿಭಾಗದಲ್ಲಿ ಇಂಗ್ಲಿಷ್ ಐಚ್ಛಿಕ ಕೋರ್ಸ್ನಡಿ ವಿವಿಧ ಸಂಯೋಜನೆಗಳು ಲಭ್ಯವಿದ್ದು, ಇಂಗ್ಲಿಷ್-ಅರ್ಥಶಾಸ್ತ್ರ-ಇತಿಹಾಸ (EEH), ಇಂಗ್ಲಿಷ್-ಇತಿಹಾಸ-ಸಮಾಜಶಾಸ್ತ್ರ (EHS) ಹಾಗೂ ಇಂಗ್ಲಿಷ್-ಅರ್ಥಶಾಸ್ತ್ರ-ಪತ್ರಿಕೋದ್ಯಮ (EEJ) ಸಂಯೋಜನೆಗಳಲ್ಲಿ ಪ್ರವೇಶ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಇಂಗ್ಲಿಷ್ ಆಯ್ಕೈಚ್ಛಿಕ ವಿಷಯದ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿ ಅರಿವು ವಿಸ್ತರಿಸುವುದು, ಸಂವಹನ ಹಾಗೂ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ಬೋಧನೆ, ಮಾಧ್ಯಮ, ಬರವಣಿಗೆ, ನಾಗರಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಭದ್ರ ನೆಲೆ ಸಿಗಲಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
ಪ್ರವೇಶ ಕುರಿತ ಹೆಚ್ಚಿನ ಮಾಹಿತಿಗಾಗಿ ರೇಖಾ ಶೆಟ್ಟಿ (96203 26569), ಪುಷ್ಪಲತಾ (94819 16341) ಹಾಗೂ ಸಾಯಿ ದಿವ್ಯಾ (95269 14773) ಅವರನ್ನು ಸಂಪರ್ಕಿಸಬಹುದಾಗಿದೆ.