ಬದುಕಿಗೆ ಮುಳುವಾಯಿತೇ ಬಣ್ಣ – 19 ರಲ್ಲೇ ಜೀವನ ಅಂತ್ಯಗೊಳಿಸಿದ ವಿದ್ಯಾರ್ಥಿನಿ

ಮಂಜೇಶ್ವರ : ದ್ವಿತೀಯ ವರ್ಷದ ಬಿಎ ಸೈಕಾಲಜಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಬಗ್ಗೆ ತಲಪಾಡಿಯ ಕಿನ್ಯದಿಂದ ವರದಿಯಾಗಿದೆ.
ಶ್ರೇಯಾ (19) ಸಾವನ್ನಪ್ಪಿದ ದುರ್ದೈವಿ.ಎಂದು ಗುರುತಿಸಲಾಗಿದೆ.

ಶ್ರೇಯಾ ಓದಿನ ಒತ್ತಡ ಹಾಗೂ ತಲೆನೋವಿನಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ. ಶ್ರೇಯಾ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ

ಮನೆಯ ಕಪಾಟಿನ ಮೇಲೆ, ಐ ಡೋಂಟ್ ಲೈಕ್‌ ದಿಸ್‌ ಜನರೇಷನ್. ಸೋ, ಐ ಡಿಸೈಡೆಡ್ ಟು ಸೂಸೈಡ್ ಎಂದು ಬರೆದಿದ್ದಾಳೆ. ಇನ್ನು ಶ್ರೇಯಾ, ಫಸ್ಟ್ ಸೆಮ್ ನಲ್ಲಿ ಎರಡು ಸಭೆಕ್ಟ್ ನಲ್ಲಿ ಫೇಲಾಗಿದ್ದಳಂತೆ. ಮೌನಿಯಾಗಿದ್ದ ಶ್ರೇಯಾ ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲವೆಂದು ಆಕೆಯ ಕುಟುಂಬ ಮೂಲಗಳು ತಿಳಿಸಿವೆ.

ಈಗಾಗಲೇ ಪೋಸ್ಟ್ ಮಾರ್ಟಂ ನಡೆಸಲಾಗಿದ್ದು, ಹೊಟ್ಟೆಯಲ್ಲಿ ಗೆಡ್ಡೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!