ಪೊಳಲಿಯಲ್ಲಿ ಅನಾಥ ಸ್ಥಿತಿಯಲ್ಲಿ ಮೃತಪಟ್ಟ ವ್ಯಕ್ತಿ; ವಾರಸುದಾರರಿಗಾಗಿ ಪೊಲೀಸರ ಮನವಿ

ಬಂಟ್ವಾಳ: ಪೊಳಲಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇವರ ವಾರೀಸುದಾರರಿದ್ದಲ್ಲಿ ಪೊಲೀಸ್ ಠಾಣೆ ಸಂಪರ್ಕ ಮಾಡುವಂತೆ ಕೋರಲಾಗಿದೆ. ಒಂಟಿಯಾಗಿ ವಾಸಿಸುತ್ತಿದ್ದ ಡೊಂಬಯ್ಯ (೬೪) ಮೃತಪಟ್ಟವರು.

ಶ್ರೀ ರಾಜ ರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ಕಳೆದ 7 – 8 ವರ್ಷದಿಂದ ಓಡಾಡಿಕೊಂಡು ಕೂಲಿ ಕೆಲಸ ಮಾಡಿ, ದೇವಸ್ಥಾನದ ವಠಾರದಲ್ಲಿಯೇ ರಾತ್ರಿ ಉಳಿದುಕೊಂಡಿದ್ದ ಡೊಂಬಯ್ಯ ಎಂಬವದು ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ದೇವಸ್ಥಾನದ ಅನ್ನಛತ್ರದಲ್ಲಿ ಊಟ ಮಾಡಿಕೊಂಡು, ದೇವಸ್ಥಾನದ ವಠಾರದಲ್ಲಿ ಬಿಕ್ಷೆ ಬೇಡಿ ಜೀವನ ನಡೆಸುತಿದ್ದರು.
ಡೊಂಬಯ್ಯ ಜೂನ್ 3ರಂದು ಮದ್ಯಾಹ್ನ ದೇವಸ್ಥಾನದ ವಠಾರದಲ್ಲಿರುವ ಪಂಪ್‌ ಶೆಡ್ಡಿನಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಮೃತರ ವಾರಸುದಾರರು ಯಾರೆಂದು ಪತ್ತೆಯಾಗದೇ ಇದ್ದು, ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಹಣಾ ಆಧಿಕಾರಿಯಾದ ಪುಟ್ಟಸ್ವಾಮಿ ಗೌಡರವರು ನೀಡಿರುವ ದೂರಿನ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೃತರ ಹೆಸರು ಮತ್ತು ಪ್ರಾಯ ಆಸ್ಪತ್ರೆಯ ಚೀಟಿಯಿಂದ ತಿಳಿದು ಬಂದಿದ್ದು, ವಿಳಾಸ ಪತ್ತೆಯಾಗಿರುವುದಿಲ್ಲ.
ಪ್ರಸ್ತುತ ಮೃತದೇಹವನ್ನು ಮೃತರ ವಾರಿಸುದಾರರ ಪತ್ತೆಯ ಬಗ್ಗೆ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮೃತರ ವಾರಿಸುದಾರರು ಪತ್ತೆಯಾದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ (08255- 235000; 9480805308) ಸಂಪರ್ಕಿಸುವಂತೆ ಸೂಚಿಸಲಾಗಿದೆ.


ಮೃತರ ಚಹರೆ;
ಹೆಸರು: ಡೊಂಬಯ್ಯ ಪ್ರಾಯ: ಸುಮಾರು 64ವರ್ಷ ತಂದೆ: ಮಾಯಿಲ. ಚಹರೆ: ಕಪ್ಪು ಮೈಬಣ್ಣ, ಸಪೂರ ಶರೀರ, ಕಪ್ಪು ಮಿಶ್ರಿತ ಬಿಳಿ ಕೆದರಿದ ಉದ್ದನೆಯ ತಲೆಗೂದಲು, ಬಿಳಿ ಉದ್ಧನೆಯ ಗಡ್ಡ, ಬಲಗಾಲಿನ ಪಾದದ ಮೇಲೆ ಗಾಯಕ್ಕೆ ಹಾಕಿರುವ ಆಸ್ಪತ್ರೆಯ ಬ್ಯಾಂಡೇಜ್‌ ಇರುತ್ತದೆ. ಬಟ್ಟೆಗಳು: ಕುಂಕುಮ ಬಣ್ನದ ಅಂಗಿ, ತಿಳಿ ಹಳದಿ ಪಂಚೆ

SHARE
Loading spinner

Leave a Reply

Your email address will not be published. Required fields are marked *

error: Content is protected !!