ಕೇರಳ: ರಾಜಕೀಯ ಪಕ್ಷಗಳ ಮುಂದಿನ ಚಿತ್ತ ಸ್ಥಳೀಯಾಡಳಿತ ಚುನಾವಣೆಯತ್ತ.

ತಿರುವನಂತಪುರಂ : 2026 ರ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ಸ್ಥಳೀಯಾಡಳಿತ ಚುನಾವಣೆಯು ಬಹುತೇಕ ಒಕ್ಟೋಬರ್ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು,ತ್ರೀ ಸ್ಥರ ಪಂಚಾಯತುಗಳಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಎಲ್ಲ ರಾಜಕೀಯ ಪಕ್ಷಗಳು ಪೂರ್ವ ಸಿದ್ಧತೆಯಲ್ಲಿದೆ.


ರಾಜ್ಯದ ಒಟ್ಟು 941 ಗ್ರಾಮ ಪಂಚಾಯತ್ , 152 ಬ್ಲಾಕ್ ಪಂಚಾಯತ್ ,14 ಜಿಲ್ಲಾ ಪಂಚಾಯತ್ ,87 ಮುನ್ಸಿಪಾಲಿಟಿ ಮತ್ತು 6 ಕಾರ್ಪೋರೇಶನ್ ಗೆ ಚುನಾವಣೆ ನಡೆಯಲಿದೆ.


ಇತ್ತೀಚೆಗೆ ನಡೆದ ನಿಲಂಬೂರ್ ಉಪಚುನಾವಣೆಯ ನಂತರ ಎಲ್ಲಾ ರಾಜಕೀಯ ಪಕ್ಷ ಗಳ ಚಟುವಟಿಕೆಗಳು ಗರಿಗೆದರಿದ್ದು , ಎರಡು ಪ್ರಭಲ ರಂಗಗಳಾದ LDF ಮತ್ತು UDF ತನ್ನ ಒಕ್ಕೂಟಕ್ಕೆ ಕೆಲವು ಸ್ಥಳೀಯ ಪಕ್ಷಗಳನ್ನು ಸೇರಿಸಿಕೊಂಡು ತನ್ನ ಒಕ್ಕೂಟವನ್ನು ಬಲಪಡಿಸುವ ಧಾವಂತದಲ್ಲಿದೆ.BJP ಯು ಎಲ್ಲಾ ರೀತಿಯ ಶ್ರಮ ವಹಿಸಿ ,ವಿಶಿಷ್ಟ ಯೋಜನೆ ಹಾಗೂ ಕಾರ್ಯ ತಂತ್ರಗಳನ್ನು ರೂಪಿಸಿ ಹೆಚ್ಚಿನ ಕಡೆ ಅಧಿಕಾರದ ಚುಕ್ಕಾಣಿ ಹಿಡಿದು ಎಡ ಬಲ ರಂಗಗಳಿಗೆ ತನ್ನ ಸಾಮರ್ಥ್ಯವನ್ನು ತೋರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಡ ಬಲ ರಂಗಗಳು ಬಲಿಷ್ಠ ವಾಗಿರುವ ಕಡೆ ತನ್ನ ಮತ ಗಳಿಕೆಯನ್ನು ಹೆಚ್ಚಿಸಿ ಎಡ ಬಲ ರಂಗಗಳ ಭದ್ರ ಕೋಟೆಗೆ ಲಗ್ಗೆ ಹಾಕುವ ಬಗ್ಗೆ ಯೋಚಿಸುತ್ತಿದೆ.


ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ತಮ್ಮ ತಮ್ಮ ರಾಜ್ಯ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು ,ಪಕ್ಷವನ್ನು ಪುನರ್ ಸಂಘಟಿಸುವ ಮೂಲಕ ಚುನಾವಣಾ ತಯಾರಿಯ ಮುಂಚೂಣಿಯಲ್ಲಿದೆ.ಎಡ ರಂಗವು ಕೆಲವು ಪ್ರಾದೇಶಿಕ ಪಕ್ಷಗಳನ್ನು ತನ್ನ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಯೋಚನೆಯಲ್ಲಿದೆ.
ಸ್ಥಳೀಯಾಡಳಿತ ಚುಮಾವಣೆಯ ಫಲಿತಾಂಶವು 2026 ರ ರಾಜ್ಯ ವಿಧಾನ ಸಭಾ ಚುನಾವಣೆಯ ಫಲಿತಾಂಶ ನಿರ್ಣಯದ ದಿಕ್ಸೂಚಿ ಯಾಗಲಿದ್ದು, ಪಿಣರಾಯ್ ವಿಜಯನ್ ನೇತೃತ್ವದ ಕಳೆದ 10 ವರ್ಷದ ಎಡರಂಗ ಸರಕಾರದ ಮೌಲ್ಯ ಮಾಪನವು ಆಗಲಿದೆ ಎಂಬುವುದು ರಾಜಕೀಯ ವಿಶ್ಲೇಷಕರ ವ್ಯಾಖ್ಯಾನ ವಾಗಿದೆ.


ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಗೆ ಈ ಚುನಾವಣೆಯು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು,ತಾನೂ ಅಧ್ಯಕ್ಷನಾದ ನಂತರ ನಡೆದ ನಿಲಂಬೂರ್ ಉಪ ಚುನಾವಣೆಯಲ್ಲಿ ಪಕ್ಷವು ಅಂದು ಕೊಂಡ ರೀತಿಯಲ್ಲಿ ಮತಗಳಿಕೆಯಾಗಿಲ್ಲ ಎಂಬ ಅಸಮಾಧಾನವಿದೆ. ನಿಲಂಬೂರ್ ಉಪ ಚುನಾವಣೆಯು ಘೋಷಣೆಯಾದ ಸಮಯದಲ್ಲಿ ಪಕ್ಷವು ಅಭ್ಯರ್ಥಿಯನ್ನು ಹಾಕುವ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡದೆ ,ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೊಂದಲ ಏರ್ಪಟ್ಟದ್ದೇ,ಬಿಜೆಪಿಯ ಮತ ಗಳಿಕೆ ಕುಸಿಯಲು ಕಾರಣವಾಯಿತೆಂದು ಕೆಲವರ ವಾದವಾಗಿದೆ.


ಕಾಂಗ್ರೆಸ್ ಪಕ್ಷವು ಯುವಕರಿಗೆ ಆಧ್ಯತೆ ನೀಡುವ ಮೂಲಕ ತಳ ಹಂತದಲ್ಲೇ ಪಕ್ಷವನ್ನೇ ಪುನರ್ ಸಂಘಟನೆ ಮಾಡಿಕೊಳ್ಳುತ್ತಿದೆ.ಸನ್ನಿ ಜೋಸೆಫ್ ಪ್ರದೇಶ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ನಂತರ ಕಾಂಗ್ರೆಸ್ ಚಟುವಟಿಕೆಗಳು ಕ್ರಿಯಾತ್ಮಕವಾಗಿದ್ದು,ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದೆ.ಎಡಕ್ಕೆ ಪೂರಕ ವೆಂಬಂತೆ ನಿಲಂಬೂರ್ ಉಪ ಚುನಾವಣೆಯಲ್ಲಿ ಪಕ್ಷವು ಪಡೆದ ಗೆಲುವು ನಾಯಕರುಗಳಿಗೆ ಮತ್ತಷ್ಟು ಹುರುಪು ತಂದಿದೆ.
ಇದೀಗ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಆಯೋಗವು ಪ್ರಕಟಿಸುವ ದಿನಗಳತ್ತ ಎದುರು ನೋಡುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!