RCB vs RR: ಸೋಲುವ ಪಂದ್ಯ ಗೆಲ್ಲಿಸಿದ ಹ್ಯಾಜಲ್​ವುಡ್​! ತವರಿನಲ್ಲಿ ಕೊನೆಗೂ ಸೋಲಿನ ಸರಪಳಿ ಕಳಚಿದ ಆರ್​​ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಗೂ ಜಯದ ನಗೆ ಬೀರಿದೆ. 2025ರಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡು ತವರಿನ ಅಭಿಮಾನಿಗಳ ಮುಂದೆ ನಿರಾಶೆಯನುಭವಿಸಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್​ಗಳ ರೋಚಕ ಜಯ ಸಾಧಿಸಿದೆ. ಕೊನೆಯ 12 ಎಸೆತಗಳಲ್ಲಿ ರಾಜಸ್ಥಾನ್​ ತಂಡಕ್ಕೆ ಗೆಲ್ಲಲು 18 ರನ್​ಗಳ ಅಗತ್ಯವಿತ್ತು. ಆದರೆ ಜೋಸ್ ಹ್ಯಾಜಲ್​ ವುಡ್​ 19ನೇ ಓವರ್​​ನಲ್ಲಿ ಕೇವಲ 1 ರನ್​ ನೀಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಕೊನೆಯ ಓವರ್​​ನಲ್ಲಿ ಯಶಸ್​ ದಯಾಳ್​​ ಕೇವಲ 5 ರನ್​ ನೀಡಿ ಆರ್​ಸಿಬಿಗೆ 11 ರನ್​ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್​​ಸಿಬಿ ಅಂಕಪಟ್ಟಿ 12 ಅಂಕಗಳೊಂದಿಗೆ 3ನೇ ಸ್ಥಾನಕ್ಕೇರಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!