ಕನ್ನಡ ಭವನದಿಂದ ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ಪ್ರತಿಭಾ ಪುರಸ್ಕಾರಕ್ಕೆ ಅಹ್ವಾನ.

ಕಾಸರಗೋಡು : ಕಾಸರಗೋಡು ಜಿಲ್ಲೆ ಹಾಗೂ ಕೇರಳ ರಾಜ್ಯದ ರಾಮಕ್ಷತ್ರಿಯ ಸಮಾಜದ ಕಳೆದ ವಾರ್ಷಿಕ ಎಸ್. ಎಸ್. ಎಲ್. ಸಿ. ಹಾಗೂ ಪಿ. ಯು. ಸಿ. ಪರೀಕ್ಷೆಗಳಲ್ಲಿ 90.ಯಾ ಅಧಿಕ ಅಂಕ ಗಳಿಸಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಬಾನ್ವಿತ ವಿದ್ಯಾರ್ಥಿಗಳಿಗೆ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ಸಾರತ್ಯದ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008)ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಪಾಂಗೋಡು ಶ್ರಿ ದುರ್ಗಾಪರಮೇಶ್ವರಿ ಸಾಂಸ್ಕೃತಿಕ ಘಟಕ ಸಂಯುಕ್ತವಾಗಿ ನೀಡುವ “ಭರವಸೆಯ ಬೆಳಕು -Light of Hopes, Student Achievement Award “ಗೆ ಅರ್ಜಿ ಸಲ್ಲಿಸಬಹುದು.

ಭಾವಚಿತ್ರ, ಪ್ರಮಾಣ ಅಂಕ ಪತ್ರ, ವಿಳಾಸ, ಸಂಪರ್ಕ ಸಂಖ್ಯೆ. ಹೆಸರಿನೊಂದಿಗೆ ಸ್ಥಳನಾಮ, ಕಲಿತ ಶಾಲೆಯ ಹೆಸರಿನೊoದಿಗೆ ಪ್ರಶಸ್ತಿಗೆ ಅಪೇಕ್ಷಿಸಬಹುದು. ಇದರೊಂದಿಗೆ ಕೇರಳ ರಾಜ್ಯದಲ್ಲಿ ರಾಮಕ್ಷತ್ರಿಯ ಸಮಾಜದ ವ್ರಿತ್ತಿ ನಿರತ ಶಿಕ್ಷಕರು /ಅಧ್ಯಾಪಕರುಗಳಿಗೂ ಕನ್ನಡ ಭವನ ನೀಡುವ “ಭರವಸೆಯ ಶಿಕ್ಷಣ ರತ್ನ -Teachers Achievement Award “ಗೆ ಅಪೇಕ್ಷಿಸಬಹುದು. ಅಪೇಕ್ಷೆ ಸಮರ್ಪಸಬೇಕಾದ ವಿಳಾಸ :ಡಾ ವಾಮನ್ ರಾವ್ ಬೇಕಲ್ 9037173400.ಸಂಧ್ಯಾರಾಣಿ ಟೀಚರ್ : 9746093552. ಪ್ರದೀಪ್ ಬೇಕಲ್..9995232032. ಎಂಬ ವಾಟ್ಸಪ್ ಸಂಖ್ಯೆ ಗಳಲ್ಲಿ ಕಳುಹಿಸಬೇಕು. ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ ವಾಮನ್ ರಾವ್ ಬೇಕಲ್ ಹಾಗೂ ಗೌರವ ಅಧ್ಯಕ್ಷರಾದ ಪ್ರದೀಪ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!