ಪುತ್ತೂರು: ರಾಮಕ್ಷತ್ರೀಯ ಸೇವಾ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಅವರ ತಾಯಿ ಪುಷ್ಪ (86ವ) ರವರು ಜೂ.19 ರಂದು ಬೆಳಿಗ್ಗೆ ನಿಧನರಾದರು. ಮರೀಲ್ ಪ್ರಗತಿ ಲೇಔಟ್ನ ದಿ.ಆನಂದ ರಾವ್ ಅವರ ಪತ್ನಿ ಪುಷ್ಪ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪುತ್ರರಾದ ರಾಮಕ್ಷತ್ರೀಯ ಸೇವಾ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್, ದಿನೇಶ್ ಕುಮಾರ್, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.