ಡಾ. ಎನ್.ಎಸ್.ಎ.ಎಂ. ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ, ನಿಟ್ಟೆ – ಇಂಟರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಡಾ. ಎನ್.ಎಸ್.ಎ.ಎಂ. ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ, ನಿಟ್ಟೆಯ ಇಂಟರ್ಯಾಕ್ಟ್ ಕ್ಲಬ್‌ನ 2026–27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು 2026ರ ಜುಲೈ 29ರಂದು ಮಧ್ಯಾಹ್ನ 2.00 ಗಂಟೆಗೆ ಶಾಲೆಯ ಬಹುಉದ್ದೇಶ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿ ಕ್ಲಬ್ ನಿಟ್ಟೆಯ ನೂತನ ಅಧ್ಯಕ್ಷರು ಹಾಗೂ ಪದಗ್ರಹಣಾಧಿಕಾರಿಗಳಾದ ರೋ.ಶ್ರೀ ಮತಿ ಶೈಲಜಾ ವಿ. ಶೆಟ್ಟಿ
ಅವರು ಇಂಟರ್ಯಾಕ್ಟ್ ಕ್ಲಬ್‌ನ ಇತಿಹಾಸ, ಅದರ ಪ್ರಮುಖ ಚಟುವಟಿಕೆಗಳು ಮತ್ತು ಸಮಾಜ ಸೇವೆಯ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಗುರಿ ಕುರಿತು ವಿವರಿಸಿದರು.

ರೋಟರಿ ಕ್ಲಬ್ ನಿಟ್ಟೆಯ ಕಾರ್ಯದರ್ಶಿಗಳಾದ ರೋ.ಡಾ. ದಿಲೀಪ್ ಕುಮಾರ್ ಅವರು ರೋಟೇರಿಯನ್ ಆಗಿ ಪಡೆದ ಅನುಭವಗಳನ್ನು ಹಂಚಿಕೊಂಡು, ಇಂಟರ್ಯಾಕ್ಟ್ ಕ್ಲಬ್‌ನ ಮೂಲ ಧ್ಯೇಯವು ಪರೋಪಕಾರ ಮತ್ತು ಸಮುದಾಯ ಸೇವೆ ಆಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ರಾಧಾ ಪ್ರಭು ಅವರು ರೋಟೇರಿಯನ್‌ಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು ಹಾಗೂ ಕ್ಲಬ್‌ನ ಚಟುವಟಿಕೆಗಳಿಗೆ ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ಭರವಸೆ ನೀಡಿದರು.

ಶಾಲೆಯ ಇಂಟರ್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿ ಮಾಸ್ಟರ್ ವಿಶ್ವಜಿತ್ ಕಾಮತ್ ಆಯ್ಕೆಯಾದರು.ಅಂತಿಮವಾಗಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!