ಮಂಗಳೂರಿನಲ್ಲಿ ಇಸ್ಕಾನ್‌ನಿಂದ ‘ಸಂಡೇ ಗುರುಕುಲ’ ಆರಂಭ: ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಮೌಲ್ಯ ಶಿಕ್ಷಣ

ಮಂಗಳೂರು: ಇಸ್ಕಾನ್ ಮಂಗಳೂರು ವತಿಯಿಂದ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ನೈತಿಕ ಮೌಲ್ಯಗಳು ಹಾಗೂ ಆಧ್ಯಾತ್ಮಿಕ ಜ್ಞಾನ ಬೆಳೆಸುವ ಉದ್ದೇಶದಿಂದ ‘ಸಂಡೇ ಗುರುಕುಲ – ಐಸಿವಿಎಫ್ (Indian Culture & Values for Family)’ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

ಜುಲೈ 5ರಿಂದ ಪ್ರತಿ ಭಾನುವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಿವಿಎಸ್ ಕಲಾಕುಂಜ್‌ನಲ್ಲಿರುವ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ನಾಲ್ಕು ತಿಂಗಳ ಅವಧಿಯ ಈ ವಿಶೇಷ ತರಗತಿಗಳು ನಡೆಯಲಿವೆ.

6ರಿಂದ 9 ವರ್ಷದ ಮಕ್ಕಳಿಗೆ ‘ಕೇಶವ’ ಹಾಗೂ 9ರಿಂದ 12 ವರ್ಷದ ಮಕ್ಕಳಿಗೆ ‘ಗೋವಿಂದ’ ಬ್ಯಾಚ್‌ಗಳನ್ನು ರೂಪಿಸಲಾಗಿದ್ದು, ಭಗವದ್ಗೀತೆ, ರಾಮಾಯಣ, ಮಹಾಭಾರತ ಸೇರಿದಂತೆ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಆಧುನಿಕ ಬೋಧನಾ ವಿಧಾನಗಳ ಮೂಲಕ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶ್ಲೋಕ ಪಠಣ, ವ್ಯಕ್ತಿತ್ವ ವಿಕಸನ, ಶಿಸ್ತು, ಆತ್ಮವಿಶ್ವಾಸ, ಸಂಸ್ಕಾರ ಹಾಗೂ ಕುಟುಂಬ ಮೌಲ್ಯಗಳ ಕುರಿತು ತರಬೇತಿ ನೀಡಲಾಗುವುದು. ಪೋಷಕರ ಸಕ್ರಿಯ ಭಾಗವಹಿಸುವಿಕೆಗೆ ವಿಶೇಷ ಒತ್ತು ನೀಡಲಾಗಿದ್ದು, ಕುಟುಂಬದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ಇದಾಗಿದೆ ಎಂದು ಇಸ್ಕಾನ್ ಪ್ರಕಟಣೆ ತಿಳಿಸಿದೆ.

ನಾಲ್ಕು ತಿಂಗಳ ಕೋರ್ಸ್‌ಗೆ ರೂ.4,000 ಶುಲ್ಕ ನಿಗದಿಪಡಿಸಲಾಗಿದ್ದು, ಅಧ್ಯಯನ ಸಾಮಗ್ರಿ ಹಾಗೂ ಕಲಾ-ಕರಕುಶಲ ಚಟುವಟಿಕೆಗಳ ವೆಚ್ಚವೂ ಇದರಲ್ಲಿ ಒಳಗೊಂಡಿದೆ.

ಹೆಚ್ಚಿನ ಮಾಹಿತಿಗಾಗಿ 8722833650 ಹಾಗೂ 72598 62303 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!