ಮಂಗಳೂರಿನಲ್ಲಿ ನಡೆದ ಟೀನ್, ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆ ; ಲಕ್ಷ್ಮೀ ಅಶೋಕ್‌ಗೆ ಒಲಿದ ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟ

​ಮಂಗಳೂರು : ಪಾಥ್‌ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿಯ ಸಹಯೋಗದಲ್ಲಿ ಏಳನೇ ಆವೃತ್ತಿಯ ಟೀನ್, ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆಯು ಭಾನುವಾರ‌ ನಗರದ ಬೋಳೂರು ಬೇಯಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.

ಲಕ್ಷ್ಮೀ ಅಶೋಕ್ ಅವರು ಮಿಸೆಸ್‌ ಇಂಡಿಯಾ ಕರ್ನಾಟಕ 2026 ಕಿರೀಟವನ್ನು ತನ್ನದಾಗಿಸಿಕೊಂಡಿದ್ದು, ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಅಶ್ವಿನಿ ಕೊಠಾರಿ ಪ್ರಥಮ ರನ್ನರ್ ಅಪ್ ಹಾಗೂ ವಾಣಿ ಎಸ್.ಮಯ್ಯ ದ್ವಿತೀಯ ರನ್ನರ್ ಅಪ್ ಕಿರೀಟ ತನ್ನದಾಗಿಸಿಕೊಂಡರು.

ಮಿಸೆಸ್ ಇಂಡಿಯಾ ಕ್ಲಾಸಿಕ್ ವಿಭಾಗದಲ್ಲಿ ದಿವ್ಯಾ ಅಮಿತ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2026 ಕಿರೀಟವನ್ನು ಪಡೆದುಕೊಂಡಿದ್ದು, ಪೂಜಾ ಪ್ರಥಮ ರನ್ನರ್ ಅಪ್ ಹಾಗೂ ಮೀನು ಸಿನ್ಹ ದ್ವಿತೀಯ ರನ್ನರ್ ಅಪ್ ಕಿರೀಟ ತನ್ನದಾಗಿಸಿಕೊಂಡರು.

ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ 2026ರ‌ ಕಿರೀಟವನ್ನು ಪದ್ಮಾ ಕರ್ಕೇರ ಅವರು ಮುಡಿಗೇರಿಸಿಕೊಂಡರು. ಮಿಸ್ ಇಂಡಿಯಾ ಕರ್ನಾಟಕ 2026 ಕಿರೀಟವನ್ನು ಸಾನಿಧ್ಯಾ ಶೆಟ್ಟಿ ಪಡೆದುಕೊಂಡರು. ಶಿವಾನಿ ಸೂರಜ್ ಪ್ರಥಮ ರನ್ನರ್ ಅಪ್ ಹಾಗೂ ಚೈತಾಲಿ ಶೆಟ್ಟಿ ದ್ವಿತೀಯ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
ಟೀನ್ ಇಂಡಿಯಾ ಕರ್ನಾಟಕ 2026 ವಿಭಾಗದಲ್ಲಿ ರಿತಿಶಾ ವಿ.ಶೇಟ್ ವಿಜೇತರಾಗಿ ಹೊರಹೊಮ್ಮಿದ್ದು, ಸನುಷಾ ಪ್ರಥಮ ರನ್ನರ್ ಅಪ್ ಹಾಗೂ ಮನುಸ್ಮಿತಾ ದ್ವಿತೀಯ ರನ್ನರ್ ಅಪ್ ಕಿರೀಟ ತಮ್ಮದಾಗಿಸಿಕೊಂಡರು.

ಡಾ.ನಿಶಿತಾ ಶೆಟ್ಟಿಯಾನ್, ಡಾ.ರಶ್ಮಾ ಶೆಟ್ಟಿ, ವಿದ್ಯಾ ಸಂಪತ್ ಕರ್ಕೇರ ಪ್ರಮುಖ ತೀರ್ಪುಗಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಮಂಗಳೂರಿನ ಕಂಟೆಂಟ್ ಕ್ರಿಯೇಟರ್ ಶಿಲ್ಪಾ ಶೆಟ್ಟಿ ತಮ್ಮ ಮನೋಜ್ಞ ಹಾಸ್ಯ ಮಾತುಗಳಿಂದ ಜನಮನ ರಂಜಿಸಿದರು. ಮಿಸೆಸ್ ಇಂಡಿಯಾ ಕರ್ನಾಟಕ ನಿರ್ದೇಶಕರಾದ ದೀಪಕ್ ಗಂಗೂಲಿ, ಮರ್ಸಿ ವೀಣಾ ಡಿಸೋಜಾ, ಸಹ ನಿರ್ದೇಶಕರಾದ ಅನೀಶಾ ಅಂಜಲಿನ್, ಟ್ರೈನರ್ ರಕ್ಷಿತಾ ನಾಯರ್ ಮೊದಲಾದವರು ಉಪಸ್ಥಿತರಿದ್ದರು. ಡಾ.ಮಧುರಾ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!