ಕಾರ್ಕಳ ಯಕ್ಷರಂಗಾಯಣ ಮೂಲ ಹೆಸರಿನಲ್ಲೇ ಉಳಿಯಲಿ : ಶ್ರೀಮತಿ ರಮಿತಾ ಸೂರ್ಯವಂಶಿ

ಕಾರ್ಕಳ ಯಕ್ಷರಂಗಾಯಣ ಕಾರ್ಕಳ ಶಾಸಕರು ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವವರಾಗಿರುವ ವಿ ಸುನಿಲ್ ಕುಮಾರ್ ಅವರ ಕನಸಿನ ಕೂಸು.
ಕಾರ್ಕಳದ ಸುತ್ತ ಮುತ್ತಲಿನ ಕಲಾವಿದರಿಗೆ ಮತ್ತು ಇಂದಿನ ಯುವ ಜನತೆಗೆ ಯಕ್ಷಗಾನದ ಮಹತ್ವ ಹಾಗೂ ರಂಗಾಯಣ ನಾಟಕಗಳ ಮಹತ್ವನ್ನು ತಿಳಿಸುವ ಉದ್ದೇಶದಿಂದ ಪ್ರಾರಂಭವಾಗಿದ್ದು ಅದಕ್ಕೆ ಸಂಬಂಧ ಪಟ್ಟ ಕೆಲಸಗಳು ನಿರಂತರವಾಗಿ ನಡೆಯುತ್ತಿತು.

ಕರಾವಳಿ ಯಕ್ಷಗಾನಕ್ಕೆ ಮನೆಮಾತಾಗಿದ್ದು ಯಕ್ಷಗಾನ ಕಲಾವಿದರ ಗೌರವಕ್ಕೆ ಯಕ್ಷರಂಗಾಯಣ ಹೆಸರನ್ನು ಇಟ್ಟಿದ್ದು ಅದು ಕಲಾಭಿಮಾನಿಗಳಿಗೆ ಖುಷಿ ವಿಚಾರ ಆದರೆ ಈಗ ಹೆಸರು ಬದಲಿಸುವ ಈ ದಿಢೀರ್‌ ಮತ್ತು ದುರುದ್ದೇಶಪೂರಿತ ನಡೆ ಇಡೀ ಕರಾವಳಿಯ ಯಕ್ಷಗಾನ ಕಲೆಗೆ, ರಂಗಭೂಮಿಗೆ ಹಾಗೂ ಹಗಲಿರುಳು ಈ ಕಲೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕಲಾವಿದರ ಸ್ವಾಭಿಮಾನಕ್ಕೆ ಮಾಡಿರುವ ಅವಮಾನವಾಗಿದೆ.

ಹಾಗಾಗಿ ಯಕ್ಷರಂಗಾಯಣದ ಅಭಿಮಾನಿಯಾಗಿ ಸರಕಾರದ ಈ ನಿರ್ಧಾರವನ್ನು ತೀವ್ರವಾಗಿ ವಿರೋದಿಸುತ್ತೆನೆ ಎಂದು ಶ್ರೀಮತಿ ರಮಿತಾ ಸೂರ್ಯವಂಶಿ ಸಾಮಾಜಿಕ ಚಿಂತಕಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!