ವಿಕಸಿತ ಭಾರತ 2047 ಗುರಿ ಸಾಧನೆಗೆ ತಂತ್ರಜ್ಞಾನವೇ ಶಕ್ತಿ: ಅಶ್ವಿನಿ ಎಂ.ಎಲ್.

ಕಾಸರಗೋಡು: ನರೇಂದ್ರ ಮೋದಿ ಸರ್ಕಾರದ 12ನೇ ವಾರ್ಷಿಕೋತ್ಸವದ ಅಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ “ನವ ಭಾರತ ಸದಸ್” ಹೆಸರಿನಲ್ಲಿ ವಿಕಸಿತ ಭಾರತ ಕನ್ವೆನ್ಷನ್ ಆಯೋಜಿಸಲಾಯಿತು. ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಅಶ್ವಿನಿ ಎಂ.ಎಲ್. ಉದ್ಘಾಟಿಸಿದರು.

ವಿಶ್ವದ ಹತ್ತನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದ್ದ ಭಾರತವನ್ನು ಕೇವಲ 12 ವರ್ಷಗಳಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿಸಲು ನರೇಂದ್ರ ಮೋದಿ ಅವರಿಗೆ ಸಾಧ್ಯವಾಗಿದೆ ಎಂದು ಅಶ್ವಿನಿ ಹೇಳಿದರು. ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ಅಸ್ಥಿರತೆಯಿಂದ ಬಳಲುತ್ತಿದ್ದ ಭಾರತಕ್ಕೆ ಆರ್ಥಿಕ ಪುನರುಜ್ಜೀವನ ಮತ್ತು ಸ್ಪಷ್ಟ ದಿಕ್ಕು ದೊರೆತದ್ದು ಮೋದಿ ಆಡಳಿತಾವಧಿಯಲ್ಲೇ ಎಂದು ಅವರು ತಿಳಿಸಿದರು.

ಜನಕಲ್ಯಾಣ ಯೋಜನೆಗಳ ಜೊತೆಗೆ ಮಹತ್ವಾಕಾಂಕ್ಷಿ ಮೂಲಸೌಕರ್ಯ ಯೋಜನೆಗಳನ್ನೂ ಮೋದಿ ಸರ್ಕಾರ ಜಾರಿಗೆ ತಂದಿದೆ. ವಂದೇ ಭಾರತ್ ರೈಲುಗಳಿಂದ ಹಿಡಿದು ಬುಲೆಟ್ ರೈಲುಗಳವರೆಗೆ, ಯುದ್ಧ ವಿಮಾನಗಳಿಂದ ಸೆಮಿಕಂಡಕ್ಟರ್‌ಗಳವರೆಗೆ ಸ್ವದೇಶದಲ್ಲೇ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಭಾರತ ಗಳಿಸಿದೆ. ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರಗಳ ಪ್ರಗತಿ 2047ರೊಳಗೆ ವಿಕಸಿತ ಭಾರತ ಗುರಿ ಸಾಧಿಸಲು ನೆರವಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೂಲಾಲ್ ಮೇಲತ್ ವಹಿಸಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನೀಲ್, ಜಿಲ್ಲಾ ಉಪಾಧ್ಯಕ್ಷ ಎಂ. ಬಲರಾಜ್, ಕಿಸಾನ್ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕುಂಜಿಕ್ಕಣ್ಣನ್ ಬಲಾಲ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಜಿಲ್ಲಾ ಖಜಾಂಚಿ ವೀಣಾ ಅರುಣ್ ಶೆಟ್ಟಿ, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ ಸೇರಿದಂತೆ ಬಿಜೆಪಿ ಹಾಗೂ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದರು.

ಕನ್ವೆನ್ಷನ್‌ಗೆ ಮುನ್ನ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಸ್ಮರಣಾರ್ಥ ಪುಷ್ಪಾರ್ಚನೆ ಹಾಗೂ ಗೌರವ ನಮನ ಕಾರ್ಯಕ್ರಮ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!