ಕಾಸರಗೋಡು – ಮಂಜೇಶ್ವರ ತಾಲೂಕಿನ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ .ಸ್ವಯಂ ಸೇವಕರ ತರಬೇತಿ ಕಾರ್ಯಗಾರ

ತುರ್ತು ಸಂದರ್ಭದಲ್ಲಿದ್ದ ಕ್ಷಣದಲ್ಲಿ ಸ್ಪಂದಿಸುವ ಸಂತ್ರಸ್ಥರ ಬದುಕಿಗೆ ಭರವಸೆಯಾಗಿರುವ ಸ್ಥಳಿಯ ಯೋಧರಂತೆ ಕಷ್ಟ ಕಾರ್ಪಣ್ಯಗಳನ್ನು ಸ್ಪಂದಿಸಿ ಸಮಾಜಪರ ಕೆಲಸಗಳನ್ನು ನಡೆಸಿ ಜನಪ್ರಿಯಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ” ಶೌರ್ಯ ” ವಿಪತ್ತು ನಿರ್ವಾಹಣ ಘಟಕದ ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್(ರಿ) ಕಾಸರಗೋಡು-ಮಂಜೇಶ್ವರ ತಾಲೂಕು , ಶೌರ್ಯ ವಿಕೋಪ ಪರಿಹಾರ ಸಮಿತಿ ಕಾಸರಗೋಡು , ಮಂಜೇಶ್ವರ ತಾಲೂಕು ಇದರ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಶ್ರೀ ಶಾರದಾಂಬ ಸಭ ಭವನ ಅಣಂಗೂರಿನಲ್ಲಿ ನಡೆಯಿತ್ತು .


ಈ ತರಬೇತಿ ಕಾರ್ಯಗಾರವನ್ನು ಕಾಸರಗೋಡು ಪೊಲೀಸ್ ಅಧಿಕಾರಿ ಶ್ರೀ ರಾಜೀವನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ , ಕಳೆದ 5 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿರುಸುವ ಎಲ್ಲಾ ಶೌರ್ಯ ವಿಪತ್ತು ನಿರ್ವಾಹಣ ಘಟಕದ ಸ್ವಯಂ ಸೇವಕರಿಗೆ ಶುಭ ಹಾರೈಸಿದರು .
ಕಾಸರಗೋಡು ಜಿಲ್ಲಾ ಸಂಚಾಲಕ ಬಾಬು ನಾಯಕ್ . ಎಸ್ . ಪ್ರಾಸ್ತವಿಕ ಮಾತನಾಡಿದರು .


ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆ ಅಧಕ್ಷರಾದ ಶ್ರೀ ಅಖಿಲೇಶ್ ನಗುಮುಗಂ ಮುಖ್ಯ ಅತಿಧಿಯಾಗಿ ಭಾಗವಹಿಸಿದರು .
ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ತೊಟ್ಟತ್ತೋಡಿ ಉಪಸ್ಥಿತರಿದ್ದರು , ಈ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಶೌರ್ಯ ಸ್ವಯಂ ಸೇವಕರನ್ನು ಕಾಸರಗೋಡು ತಾಲೂಕು ಭಜನಾ ಪರಿಷತ್ ಅಧಕ್ಷರಾದ ಶ್ರೀ ವೆಂಕಟ್ರಮಣ ಹೊಳ್ಳ ಅಭಿನಂದಿಸಿದರು . ಹಾಗೂ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಬೆಳ್ತಂಗಡಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ಪಾಯಸ್ ಅವರು ತರಬೇತಿ ಕಾರ್ಯಗಾರದಲ್ಲಿ ಭವಿಷ್ಯದಲ್ಲಿ ತಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸಬೇಕು , ಮತ್ತು ಉತ್ತಮ ಸಾಂಸ್ಥಿಕ ಅಭಿವೃದ್ಧಿಯನ್ನು , ಹೇಗೆ ನಡೆಸಬೇಕು ಎoಬುದರ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನಗಳನ್ನು ನೀಡಿದರು .

ಕೇಂದ್ರ ಒಕ್ಕೂಟದ ಅಧಕ್ಷರಾದ ಶ್ರೀ ಜ್ಞಾನೇಶ್ವರ ಆಚಾರ್ಯ ಪರಕಿಲ್ಲ , ಮಾಸ್ಟರ್‌ಗಳಾದ ಶ್ರೀ ಮಾಧವ ಗೌಡ , ಶ್ರೀ ಜೈವಂತ ಪಟಗಾರ್ , ಶ್ರೀ ಗಣೇಶ ಆಚಾರ್ಯ , ಶ್ರೀ ಜಗನ್ನಾಥ್ , ಶ್ರೀ ಪ್ರದೀಪ್ ಕಿರಣ್ , ಕಾಸರಗೋಡು , ಮಂಜೇಶ್ವರ ತಾಲೂಕಿನ ಶೌರ್ಯ ಘಟಕದ ಕ್ಯಾಪ್ಟನ್ಗಳಾದ ಶ್ರೀ ರವೀಂದ್ರ ಅಣoಗೂರು , ಮತ್ತು ಶ್ರೀ ಸುರೇಂದ್ರ ಅವರು ತರಬೇತಿ ಕಾರ್ಯಗಾರದಲ್ಲಿ ಬಾಗವಹಿಸಿದರು , ಹಾಗೂ ಎಲ್ಲಾ ವಲಯದ ಮೇಲ್ವಿಚಾರಕರು ಉಪಸ್ಥಿರಿದ್ದರು . ಈ ಕಾರ್ಯಕ್ರಮಕ್ಕೆ ಕಾಸರಗೋಡು ತಾಲೂಕಿನ ಯೋಜನಾಧಿಕಾರಿ ದಿನೇಶ್ ಸ್ವಾಗತಿಸಿ , ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿ ಶಶಿಕಲಾ ಸ್ವರ್ಣ ವಂದಿಸಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!