ಶ್ರೀ ರಾಮ ಎ.ಯು.ಪಿ ಶಾಲೆ ಕುಬಣೂರಿನಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

ಕುಬಣೂರು ಜುಲೈ 12 : ಶ್ರೀ ರಾಮ ಎ.ಯು.ಪಿ ಶಾಲೆ ಕುಬಣೂರಿನಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಮೀನಾರು ಪಕ್ಕೀರ ಶೆಟ್ಟಿ ಸಭಾಂಗಣದಲ್ಲಿ ಜರಗಿತು. ತಾರಾಮಣಿ ಟೀಚರ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ವಾರ್ಡ್ ಸದಸ್ಯರಾದ ವಿಜಯ ಕುಮಾರ್ ರೈ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಸುರೇಶ್ ಕುಮಾರ್ ಮಂಗಲ್ಪಾಡಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಮಾತನಾಡಿದರು.

ಯು ಎಸ್‌ ಎಸ್ ಪ್ರತಿಭಾನ್ವಿತರಾದ ತನ್ವಿತ್ ಪಿ ಶೆಟ್ಟಿ, ವಿವೇಕ್, ಚಿನ್ಮಯಿ ಹಾಗೂ ನವೋದಯ ಪ್ರತಿಭಾನ್ವಿತರಾದ ಶಾನ್ವಿ, ಕೃತಿ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀಯುತ ಬಾಬು ಟಿ.ವಿ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಕುಂಬಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿ, ರಕ್ಷಕರಿಗೆ ಜಾಗೃತಿ ಮಾಹಿತಿ ತರಗತಿಯನ್ನು ನಡೆಸಿದರು. ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಅನಿತಾ ರವೀಂದ್ರ ಮೋಹನ್ ಉಪಸ್ಥಿತರಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಅಶೋಕ್ ಕುಮಾರ್ ಹೊಳ್ಳ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ 2025-26 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ನೂತನ ಪಿ.ಟಿ.ಎ ಅಧ್ಯಕ್ಷರಾಗಿ ವಸಂತ ಕುಮಾರ್ ಮಯ್ಯ, ಪಿ.ಟಿ.ಎ ಉಪಾಧ್ಯಕ್ಷರಾಗಿ ರವಿರಾಜ್ ಆಯ್ಕೆಗೊಂಡರು. ಮಾತೃ ಮಂಡಳಿ ಅಧ್ಯಕ್ಷೆಯಾಗಿ ರಮ್ಲ ಮೊಹಮ್ಮದ್ ಅಶ್ರಫ್ ಹಾಗೂ ಉಪಾಧ್ಯಕ್ಷೆಯಾಗಿ ಸತ್ಯವತಿ ಆಯ್ಕೆಗೊಂಡರು. ಶಾಲಾ ಅಧ್ಯಾಪಿಕೆ ಸ್ವಪ್ಪಾ ಟೀಚರ್ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಮೀರಾವತಿ ಪ್ರಾಸ್ತಾವಿಕ ನುಡಿಗಳೊಂದಿಗೆ ಶಾಲಾ ವಿಚಾರಗಳನ್ನು ಮಂಡಿಸಿದರು. ಶಾಲಾ ಅಧ್ಯಾಪಕರಾದ ಸತೀಶ್ ನಿರೂಪಿಸಿ, ಗಿರಿರಾಜ್ ಸಹಕರಿಸಿದರು. ಹರಿದಾಸ್ ವಂದಿಸಿದರು. ಅನಂತರ ತರಗತಿ ಪಿ.ಟಿ.ಎ ಜರಗಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!