ಲಕ್ಷ್ಮಿ ಪ್ರಿಯಾ, ಶ್ವೇತಾ ಮೆನನ್ ವಿರುದ್ಧದ ದೂರು: ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ ನಟಿ ಅನ್‌ಸಿಬ ಹಸನ್

ನಟಿ ಅನ್‌ಸಿಬ ಹಸನ್ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಟಿಯರಾದ ಲಕ್ಷ್ಮಿ ಪ್ರಿಯಾ ಮತ್ತು ಶ್ವೇತಾ ಮೆನನ್ ವಿರುದ್ಧ ನೀಡಿದ್ದ ದೂರಿನ ಸಂಬಂಧ ಎರ್ನಾಕುಳಂ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ಪಾಲಾರಿವಟ್ಟಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಪ್ರಕರಣವನ್ನು ಎರ್ನಾಕುಳಂ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ-9ಕ್ಕೆ ಸಲ್ಲಿಸಲಾಗಿದ್ದು, ಈ ಸಂಬಂಧ ಪೊಲೀಸರಿಂದ ನ್ಯಾಯಾಲಯ ವಿವರಣೆ ಕೇಳಿದೆ.

ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ವಿರುದ್ಧ ಮಾನಹಾನಿಕರ, ಅಶ್ಲೀಲ ಹಾಗೂ ಸುಳ್ಳು ಆರೋಪಗಳನ್ನು ಒಳಗೊಂಡ ವಿಡಿಯೋಗಳನ್ನು ಪ್ರಸಾರ ಮಾಡಲಾಗಿದೆ ಎಂದು ಅನ್‌ಸಿಬ ದೂರಿನಲ್ಲಿ ಆರೋಪಿಸಿದ್ದಾರೆ. ತಮ್ಮ ವ್ಯಕ್ತಿತ್ವ ಹತ್ಯೆ ಮಾಡಲು ಶ್ವೇತಾ ಮೆನನ್ ಹಾಗೂ ಲಕ್ಷ್ಮಿ ಪ್ರಿಯಾ ಸಂಚು ರೂಪಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿನ ಹೇಳಿಕೆಗಳು ಅಶ್ಲೀಲವಾಗಿದ್ದು, ಮಹಿಳೆಯಾಗಿ ತಮ್ಮ ಗೌರವ ಮತ್ತು ಮರ್ಯಾದೆಗೆ ಧಕ್ಕೆ ಉಂಟುಮಾಡುವ ಜೊತೆಗೆ ಸಾರ್ವಜನಿಕರ ಮುಂದೆ ತಮ್ಮನ್ನು ಅಪಕೀರ್ತಿಗೊಳಿಸುತ್ತಿವೆ ಎಂದು ಅನ್‌ಸಿಬ ತಿಳಿಸಿದ್ದಾರೆ.

ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಸೃಷ್ಟಿಸಿ ಅವಮಾನ ಮಾಡುವ ಉದ್ದೇಶದಿಂದ ಇಬ್ಬರೂ ಸಂಚು ರೂಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹಾಗೂ ಅಶ್ಲೀಲ ವಿಡಿಯೋಗಳನ್ನು ತಯಾರಿಸಿ ಹರಡಲಾಗಿದ್ದು, ಇದಕ್ಕಾಗಿ ಶ್ವೇತಾ ಮೆನನ್ ತಿರುವನಂತಪುರದ ಪಿಆರ್ ಏಜೆನ್ಸಿಯೊಂದರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅನ್‌ಸಿಬ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!