ಅನಾಹುತಕ್ಕೆ ಆಹ್ವಾನಿಸುತ್ತಿರುವ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೋಗುವ ಫೂಟ್ ಪಾತ್

ಮಂಗಳೂರು : ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೋಗುವ ಫೂಟ್ ಪಾತ್ ರಸ್ತೆಯು ಜರಿದು ಗುಂಡಿಯಾಗಿದ್ದು ಪಾದಚಾರಿಗಳ ಅನಾಹುತಕ್ಕೆ ಆಸ್ಪದವನ್ನು ನೀಡುವಂತಿದೆ. ದಿನವೂ ಕಿಕ್ಕಿರಿದು ನೆರೆದು ಸಂಚರಿಸುವ ರಸ್ತೆಯು ಮಳೆಯಿಂದ ಹಾನಿಯಾಗಿದೆ. ಮಾತ್ರವಲ್ಲದೆ ಈ ಮೊದಲೇ ಅಲ್ಲಿ ಇದ್ದ ಡ್ರೈನೇಜ್ ಗುಂಡಿಯು ಬಾಯಿ ತೆರೆದಿದ್ದು ಅಪಾಯವನ್ನು ಹೆಚ್ಚಿಸುತ್ತಿದೆ . ಸ್ಥಳೀಯರು ಹೇಳುವಂತೆ ಈ ಗುಂಡಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಬಿದ್ದ ಘಟನೆ ಕೆಲವೇ ದಿನಗಳ ಹಿಂದೆ ನಡೆದಿದೆ. ಅಪಾಯ ಕಣ್ಣೆದುರಿಗೇ ಇದ್ದರೂ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ .

ಅದಕ್ಕೆ ತೇಪೆ ಹಚ್ಚುವ ಕೆಲಸವೂ ಮಾಡದೇ, ಗುಂಡಿಯ ಬದಿಗೆ ಯಾವುದೇ ಕನಿಷ್ಠ ಅಪಾಯವನ್ನು ತಡೆಯುವ ಸೂಚಕವನ್ನು ಇಟ್ಟಿಲ್ಲ. ಪೂಟ್ ಪಾತ್ ರಸ್ತೆಯ ಬದಿಗಿರುವ ರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿದ್ದು ಆ ಭಾಗವಾಗಿ ನಡೆದು ಹೋಗುವುದು ಸವಾಲಾಗಿದೆ . ಮುಂಗಾರು ಚುರುಕಾಗಿದ್ದು ಹಾನಿಯಾದ ರಸ್ತೆಯು ಬಿರುಕು ಬಿಟ್ಟಿದ್ದು ಮುಂದಿನ ದಿನಗಳಲ್ಲಿ ದೊಡ್ದ ಅಪಾಯದ ಮುನ್ಸೂಚನೆಯಂತೆ ಗೋಚರಿಸುತ್ತಿದೆ . ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!