₹6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಕೆಲಸಗಾರನ ಬಂಧನ

ಮಂಗಳೂರು: ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಎಂಬಲ್ಲಿ ಮನೆಯೊಂದರ ಹಿಂಭಾಗದ ಕೊಠಡಿಯ ಛಾವಣಿ ಬದಲಾವಣೆ ಹಾಗೂ ನಂತರ ಹಾಲ್ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿಯನ್ನು ಮೇಸ್ತ್ರಿ ಹಾಗೂ ಸಹಾಯಕ ಕೆಲಸದಾರರ ಮೂಲಕ ದಿನಾಂಕ 06-07-2026 ರಿಂದ 6-07-2026 ನಡೆಸಿದ್ದರು. ಆ ಅವಧಿಯಲ್ಲಿ ಮನೆಯ ಕೋಟೆಯ ಟೇಬಲ್ ಡ್ರಾವರ್ನಲ್ಲಿ ಸಣ್ಣ ಪರ್ಸ್ನಲ್ಲಿ ಇಟ್ಟುಕೊಂಡಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಉಂಗುರ, 4 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್ ಸೇರಿ ಸುಮಾರು ರೂ 6,37,000/- ಬೆಲೆಯ ಸೊತ್ತುಗಳು ಕಳವು ಆಗಿದ್ದು, ಈ ಬಗ್ಗೆ ಮಂ.ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 68/2026 ಕಲಂ 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಮನೆ ಕೆಲಸಕ್ಕೆ ಇದ್ದ ಕೆಲಸಗಾರರನ್ನು ಕೂಲಂಕುಷವಾಗಿ ವಿಚಾರಣೆಯನ್ನು ನಡೆಸಿದಾಗ ಆರೋಪಿ ಜಹೀರುದ್ದೀನ್ (24 ವರ್ಷ), ತಂದೆ: ನಿರಾಜುದ್ದೀನ್, ವಾಸ: ಮುಜಾಹನಿ, ಗುಮಾರಿ, ಬಲರಾಮ್ ಪುರ್, ಉತ್ತರ ಪ್ರದೇಶ, ಹಾಲಿ ವಾಸ: ಅಜಿಜುದ್ದೀನ್ ರಸ್ತೆ, ಬಂದರು, ಮಂಗಳೂರು ಎಂಬಾತನು ಚಿನ್ನಾಭರಣ ಹಾಗೂ ವಾಚನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಯಿಂದ ಕಳವಾಗಿದ್ದ ಚಿನ್ನಾಭರಣಗಳನ್ನು ಹಾಗೂ ವಾಚನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಮುಂದಿನ ಕ್ರಮದ ಕುರಿತು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತಾರೆ.

ಈ ಪ್ರಕರಣವನ್ನು ಭೇಧಿಸುವಲ್ಲಿ ಮಂ.ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಡಿ.ಅರ್ ಮಂಜಪ್ಪ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ಅರುಣ್ ಕುಮಾರ್.ಡಿ ಹಾಗೂ ಠಾಣೆಯ ಸಿಬ್ಬಂದಿಯ ತಂಡವು ಕ್ಷಿಪ್ರ ಹಾಗೂ ಕೂಲಂಕುಷವಾಗಿ ವಿಚಾರಣೆಯನ್ನು ನಡೆಸಿ ಪ್ರಕರಣವನ್ನು 24 ಗಂಟೆಯೊಳಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!