ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮ

ಮಂಗಳೂರು: ಕೋಣಾಜೆಯ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಓರಿಯೆಂಟೇಶನ್ ಕಾರ್ಯಕ್ರಮ ಪೇಸ್ ನಾಲೆಡ್ಜ್ ಸಿಟಿಯ ಆಡಿಟೋರಿಯಂನಲ್ಲಿ ಬುಧವಾರ ನಡೆಯಿತು‌‌. ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೀಝ್ ಎಂ.ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾಲೇಜು ಜೀವನದಲ್ಲಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಝ್ ಜೆ. ಹಾಸಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಂತರರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ, ಕೇರಳದ ಸಂಸ್ಥಾ ಸಹಭಾಗಿತ್ವ ವಿಭಾಗದ ಮುಖ್ಯಸ್ಥರಾದ ಶರತ್ ವೇಣುಗೋಪಾಲ್ ಹಾಗೂ ಐಎಸ್‌ಡಿಸಿ ಯುಕೆ ಪ್ರಾದೇಶಿಕ ವ್ಯವಸ್ಥಾಪಕರಾದ ನಂದಾದೇವಿ ಕೆ.ವಿ. ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಸಲೀಮುಲ್ಲಾ ಖಾನ್, ಡಾ. ಅಫೀಫಾ ಸಲೀಮ್, ಡಾ. ಸಯ್ಯಿದ್ ಅಮೀನ್ ಅಹ್ಮದ್, ಮುಹಮ್ಮದ್ ಫೈಝಲ್ ಎನ್., ಡಾ. ಇಕ್ಬಾಲ್, ಪ್ರೊ. ಇಸ್ಮಾಈಲ್ ಖಾನ್, ಶರಫುದ್ದೀನ್ ಪಿ.ಕೆ., ಹಾರೀಸ್ ಟಿ.ಡಿ., ಶಫಿನಾಝ್ ಸಯ್ಯಿದ್ ಇಸ್ಮಾಈಲ್ ಮೊದಲಾದವರು ಉಪಸ್ಥಿತರಿದ್ದರು.

ಉಪಪ್ರಾಂಶುಪಾಲರಾದ ಡಾ. ಜಿ. ಹರಿಕೃಷ್ಣನ್ ಸ್ವಾಗತಿಸಿ ಸಹಾಯಕ ಪ್ರಾಧ್ಯಾಪಕರಾದ ಮುನೀರಾ ಎ. ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಖೈರುನ್ನೀಸಾ, ಅಲೀಮಾ ನಬೀಲಾ, ನಜ್ಲಾ ಮರಿಯಮ್ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!