ನವದೆಹಲಿ: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಯಶಸ್ವಿಯಾಗಿ ಅಂತ್ಯಗೊಂಡಿದ್ದು, ಒಟ್ಟು 39 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಭಾರತ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಕ್ರೀಡಾಕೂಟದ 11ನೇ ಹಾಗೂ ಅಂತಿಮ ದಿನ ಭಾರತಕ್ಕೆ ಯಾವುದೇ ಪದಕ ಲಭಿಸಲಿಲ್ಲ. ಜೂಡೋ ಸ್ಪರ್ಧೆಯಲ್ಲಿ ಮಹಿಳೆಯರ –78 ಕೆಜಿ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಇಶ್ರೂಪ್ ನಾರಂಗ್ ಸೋಲು ಕಂಡರೆ, ಪ್ಯಾರಾ ಸೈಕ್ಲಿಂಗ್‌ನ ಮಹಿಳೆಯರ C4–C5 ಟೈಮ್ ಟ್ರಯಲ್ ಫೈನಲ್‌ನಲ್ಲಿ ಲಿಶಾ ದಾಸ್ ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇವರ ಸೋಲಿನೊಂದಿಗೆ ಭಾರತದ ಅಭಿಯಾನವೂ ಅಂತ್ಯಗೊಂಡಿತು.

ಭಾರತದ ಪರ ವೇಟ್‌ಲಿಫ್ಟಿಂಗ್, ಬಾಕ್ಸಿಂಗ್, ಅಥ್ಲೆಟಿಕ್ಸ್, ಜೂಡೋ ಹಾಗೂ ಪ್ಯಾರಾ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ದಾಖಲಾಗಿತು. ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದರೆ, ಜೂಡೋದಲ್ಲಿ ಅಸ್ಮಿತಾ ಡೇ ಮತ್ತು ಹರ್ಷ್ ಸಿಂಗ್, ಬಾಕ್ಸಿಂಗ್‌ನಲ್ಲಿ ಪ್ರೀತಿ ಪವಾರ್, ಜಾಸ್ಮಿನ್ ಲಂಬೋರಿಯಾ, ಸಾಕ್ಷಿ ಚೌಧರಿ, ಪ್ರಿಯಾ ಘಂಘಾಸ್, ಅರುಂಧತಿ ಚೌಧರಿ, ಸಚಿನ್ ಸಿವಾಚ್ ಹಾಗೂ ಅಂಕುಶ್ ಪಂಗಲ್ ಚಿನ್ನದ ಪದಕಗಳನ್ನು ಗೆದ್ದು ಭಾರತದ ಪದಕ ಬೇಟೆಗೆ ಮೆರುಗು ತಂದರು.
ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಶರ್ಮಿಳಾ ಧಂಕರ್, ದಿಲೀಪ್ ಗವಿತ್ ಹಾಗೂ ಶುಭಂ ಜುಯಾಲ್ ಚಿನ್ನದ ಪದಕಗಳನ್ನು ಗೆದ್ದರೆ, ಅಥ್ಲೆಟಿಕ್ಸ್‌ನಲ್ಲಿ ಸರ್ವೇಶ್ ಕುಶಾರೆ, ಗುಲ್ವೀರ್ ಸಿಂಗ್, ಮುರಳಿ ಶ್ರೀಶಂಕರ್, ನೀರಜ್ ಚೋಪ್ರಾ ಹಾಗೂ ಪ್ರವೀಣ್ ಚಿತ್ರಾವೆಲ್ ಸೇರಿದಂತೆ ಹಲವು ಆಟಗಾರರು ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದು ಭಾರತದ ಸಾಧನೆಗೆ ಕೊಡುಗೆ ನೀಡಿದರು.
ಒಟ್ಟಾರೆ ವಿವಿಧ ವಿಭಾಗಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಭಾರತ 39 ಪದಕಗಳೊಂದಿಗೆ ಕ್ರೀಡಾಕೂಟವನ್ನು ಯಶಸ್ವಿ.


