ರಾಜಸ್ಥಾನದಿಂದ ಆಡು ತರುವುದಾಗಿ 7.63 ಲಕ್ಷ ರೂ. ವಂಚನೆ; ನಾಲ್ವರ ವಿರುದ್ಧ ಕೇಸ್

ಕಾಸರಗೋಡು: ರಾಜಸ್ಥಾನದಿಂದ ಆಡುಗಳನ್ನು ತಂದುಕೊಡುವುದಾಗಿ ನಂಬಿಸಿ 7,63,000 ರೂಪಾಯಿ ಪಡೆದು ವಂಚಿಸಿದ ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

​ಹೊಸಬೆಟ್ಟು ಜಿ.ಎಲ್.ಪಿ. ಸ್ಕೂಲ್ ಸಮೀಪದ ಯಾಕೂಬ್ ಎಂಬುವವರು ನೀಡಿದ ದೂರಿನ ಮೇರೆಗೆ ರಾಜಸ್ಥಾನದ ಅಜ್ಮೀರ್ ಮತ್ತು ಪುಷ್ಕರ್ ಮೂಲದ ರತ್ತನ್, ಭಗವಾನ್ ಹಾಗೂ ನವೀನ್ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಜ್ಮೀರ್‌ನ ಕೆ.ಜಿ.ಎನ್. ಗೋಟ್ ಫಾರ್ಮ್‌ನಿಂದ ಆಡುಗಳನ್ನು ಒದಗಿಸುವುದಾಗಿ ನಂಬಿಸಿ ಸೆಪ್ಟೆಂಬರ್ 7ರಂದು ಬ್ಯಾಂಕ್ ಖಾತೆ ಮೂಲಕ ಹಣ ಪಡೆದ ಆರೋಪಿಗಳು, ಆಡುಗಳನ್ನೂ ನೀಡದೆ ಹಣವನ್ನೂ ಮರಳಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!