ಕಾಪು: ಹಠಾತ್ ರಸ್ತೆಗೆ ಓಡಿಬಂದ ಶ್ವಾನ- ಸ್ಕಿಡ್ ಆಗಿ ಬಿದ್ದ ಸ್ಕೂಟರ್ ಸವಾರ

ಉಡುಪಿ: ನಾಯಿಯೊಂದು ಏಕಾಏಕಿ ರಸ್ತೆಗೆ ಅಡ್ಡ ಬಂದ ಪರಿಣಾಮ ಸ್ಕೂಟರ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡ ಘಟನೆ ಕಾಪು ಫ್ಲೈಓವರ್ ಕೆಳಗಿನ ಅಂಡರ್‌ಪಾಸ್ ಸಮೀಪ ಬುಧವಾರ ಸಂಜೆ ನಡೆದಿದೆ.


ಸರ್ವಿಸ್ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ನಾಯಿಯೊಂದು ಹಠಾತ್ ರಸ್ತೆಗೆ ಓಡಿಬಂದಿದೆ. ಇದರಿಂದ ಸ್ಕೂಟರ್‌ನ ನಿಯಂತ್ರಣ ಕಳೆದುಕೊಂಡ ಸವಾರ ನಾಯಿಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ.

ಅಪಘಾತದಲ್ಲಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!