ಸುತ್ಯೆ ಹಾಗೂ ಕೊಡಿಯಡಿ🙏
ಗಣಪತಿ ಸುತ್ಯೆ🙏
(ದೈವಾರಾಧನೆಯಲ್ಲಿ ಮೊದಲು ಬಡಿಸುವ ಕೊಡಿ.)
ದೀಪ, ಊದುಬತ್ತಿ ಹಚ್ಚಿ
ಒಂದು ಕೊಡಿ ಬಾಳೆ ಎಲೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ವೀಳ್ಯದೆಲೆ, ಹೂ, ಕಾಣಿಕೆ,ಇಟ್ಟು ಪ್ರಾರ್ಥನೆ

ದೈವದ ಸುತ್ಯೆ🙏
ಕೋಲು ಬಲಿಯ ಕೆಳಗೆ,
ಕೊಡಿಬಾಳೆ ಎಲೆಯಲ್ಲಿ ಭತ್ತ,ಅದರ ಮೇಲೆ ಒಂದು ಕೊಡಿ ಬಾಳೆ ಎಲೆ ಹಾಕಿ ಕುಚ್ಚಿಲಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಹೂ,ಊದುಬತ್ತಿ ಇಟ್ಟು ಪ್ರಾರ್ಥನೆ
(ದೈವಗಳು ಘಟ್ಟ ದಿಂದ ತುಳುನಾಡ್ ಗೆ ಬರುವಾಗ “ಅತಿಸಾರ” ಭತ್ತ ವನ್ನು ತಂದಿದ್ದಾರೆ ಎಂಬ ನಂಬಿಕೆ )
ಬಲಿಯಮೇಲೆ ಹೊದ್ಲು, ಸುಣ್ಣ, ಅರಸಿನ ಹುಡಿ, ನೀರು ಬೆರೆಸಿ ದೊಡ್ಡ ಉಂಡೆ ಗಾತ್ರ ಮಾಡಿ ಕೊಡಿ ಬಾಳೆಎಲೆಯಲ್ಲಿ ಇಟ್ಟು ಕೋಲ್ತಿರಿ ಹಚ್ಚುವುದು 🙏
ಇದಕ್ಕೆ “ಮುದ್ರೆ” ಅಂತಾರೆ ಇದರ ಮೇಲೆ ಕೋಳಿ ತಲೆಕೊಯ್ಯುವುದು
(ಸಾವಿರ ಗಂಡಗಣಕುಲೆಗ್ ನೆತ್ತೆರ್ ದಾವರ ಕೊಡುವಂತ ಪದ್ಧತಿ)

ಕೊಡಿಯಡಿ🙏
ದೈವಗಳ ಭಂಡಾರ ಏರಿದ ನಂತರ, “ಕುರ್ದಿ” (ಅರಸಿನ ಸುಣ್ಣ ಮಿಶ್ರಿತ ನೀರು) ಮಾಡಿ ಶುದ್ಧ ಮಾಡಿದ ನಂತರ ಕೊಡಿ ಹಾಕುವುದು, ಮೊದಲು ಗಣಪತಿ ಕೊಡಿ
ನಂತರ ಒಂದೊಂದು ದೈವಗಳಿಗೆ ಇಂತಿಷ್ಟು ಕೊಡಿ ಹಾಕುವುದು
ಗುಳಿಗ ದೈವಕ್ಕೆ ಮೂರು ಕೊಡಿ
ನಡುವಿನಲ್ಲಿ ದೈವದ ಸುತ್ಯೆ ಆಚೆ ಈಚೆ ಪೊರಿ, ಬಜಿಲ್, ಸಿಯಾಳ ದ ಕೊಡಿ
ಕುಪ್ಪೆ ಪಂಜುರ್ಲಿ ದೈವಕ್ಕೆ ದೇವರ ಕೊಡಿ ಸೇರಿ 16 ಕೊಡಿ
ಅಣ್ಣಪ್ಪ ಪಂಜುರ್ಲಿ ದೈವಕ್ಕೆ ದೇವರ ಕೊಡಿ ಸೇರಿ 5 ಕೊಡಿ
ವರ್ಣಾರ ಪಂಜುರ್ಲಿ ಗೆ ದೇವರ ಕೊಡಿ ಸೇರಿ 7 ಕೊಡಿ
ಕಲ್ಲುರ್ಟಿ ದೈವಕ್ಕೆ 5 ಕೊಡಿ
ಕೋಮರಾಯ ದೈವಕ್ಕೆ 9 ಕೊಡಿ

ಹೀಗೆ ಹಲವು ದೈವಗಳಿಗೆ ಇಂತಿಷ್ಟು ಕೊಡಿ ಹಾಕುವ ಪದ್ಧತಿ 🙏
(ಕೆಲವೊಂದು ಊರಿನ ಕಟ್ಟು ಪ್ರಕಾರ ಬದಲಾವಣೆ ಇರಬಹುದು )
ಗುಳಿಗ, ಪಂಜುರ್ಲಿ,ಹಾಗೆ ಕೆಲವು ದೈವಗಳಿಗೆ ಕೊಡಿಯಡಿಯಲ್ಲಿ, ಕಲಶ ಕಟ್ಟ ಬೇಕು, ಇದು ಪ್ರಧಾನ
ಒಂದು ಬಿಂದಿಗೆಯಲ್ಲಿ ನೀರು ಓಲೆ ಬೆಲ್ಲ ಹಾಕಿ ಸಣ್ಣ ತುಂಡು ಕೊಡಿ ಬಾಳೆ ಎಲೆಯಲ್ಲಿ ಬಿಂದಿಗೆಯ ಬಾಯಿ ಮುಚ್ಚಿ ಕಟ್ಟುವುದು
ಅವರವರ ಕುಟುಂಬ ತರವಾಡಿನಲ್ಲಿ ಏನೇ ಸಮಸ್ಯೆಗಳಿದ್ದರೂ ದೈವದ ಕೊಡಿಯಡಿಯಲ್ಲಿ ಪರಿಹರಿಸಬಹುದು, ಸತ್ಯ ಪ್ರಮಾಣವೂ ಮಾಡಬಹುದು
ಕೊಡಿಯಡಿಗೆ ಅಷ್ಟು ಪ್ರಾಮುಖ್ಯತೆ ಇದೆ
ಪನಿಯೆರೆ ಸಮುದ್ರ ನೀರ್ ದಾತ್ ಉಂಡು, ತೆರಿಪಾಯಿನಿ ಒಂಜಿ ಪನಿ ಬರ್ಸ ದಾತ್ 🙏
ನಂಬಿಕೆ ಒರಿಪಾಗ 🙏
❣️ಸ್ನೇಹಜೀವಿ❣️

✍️ಬರಹ:- ಉದಯಮಲ್ಲಿ, ಅಮ್ಮ್ಚಿ ಕೆರೆ ಬೆದ್ರಡ್ಕ, ಕಾಸರಗೋಡು

