ಆಧುನಿಕ ವಿಶಿಷ್ಟ,ಹ್ಮದಯ ಕವಾಟ ವಾಲ್ವ್ ಇನ್ ವಾಲ್ವ್ ಟಿ ಎ ವಿ ಆರ್ ಚಿಕಿತ್ಸೆ ಯಶಸ್ವಿ -ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ ಯೂಸುಫ್ ಕುಂಬ್ಳೆ

ಇಂಡಿಯಾನಾ ಅಸ್ಪತ್ರೆಯಲ್ಲಿ ಮಂಗಳೂರು ನಗರದ ಮೊಟಮೊದಲ ಯಶಸ್ವಿ ವಿಶಿಷ್ಟ,ಹ್ಮದಯ ಕವಾಟ ವಾಲ್ವ್ ಇನ್ ವಾಲ್ವ್ ಟಿ ಎ ವಿ ಆರ್ ಚಿಕಿತ್ಸೆಯನ್ನು ಇಬ್ಬರು ಕ್ಲಿಷ್ಟಕರ ಪರಿಸ್ಥಿತಿ ಇರುವ ರೋಗಿಗಳಿಗೆ ಅಳವಡಿಸುವ ಮುಖಾಂತರ ಆಧುನಿಕ ಹೃದಯ ಚಿಕಿತ್ಸ ಕ್ಷೇತ್ರದಲ್ಲಿ ಮಹತ್ವಕರವಾದ ಮೈಲಿಗಲ್ಲನ್ನು ಸಾಧಿಸಿದೆ ಎಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಾರಾದ ಡಾ ಯೂಸುಫ್ ಕುಂಬ್ಳೆ ತಿಳಿಸಿದರು .

ಸುದ್ದಿಗಾರೊಂದಿಗೆ ಮಾತನಾಡಿದ ಅವರು , ಮಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ Valve-in-Valve TAVR (Transcatheter Aortic Valve Replacement) ತಂತ್ರಜ್ಞಾನವನ್ನು ಅಳವಡಿಸಿ ಯಶಸ್ವಿಯಾಗಿದೆ . ಈ ತರಹದ ಸಾಂದರ್ಭಿಕ ಹಾಗೂ ಸವಾಲಿನ ಕಿಷ್ಟಚಿಕಿತ್ಸೆ ನಡೆದಿರುವುದು ಕರಾವಳಿಯಲ್ಲಿ ಇದೇ ಮೊದಲು ಕರ್ನಾಟಕದ ಮೊದಲ “ವಾಲ್-ಇನ್-ವಾಲ್ಡ್‌ ಪ್ರಕ್ರಿಯೆ – ಸುಮಾರು ನಾಲ್ಕು ವರ್ಷಗಳ ಹಿಂದೆ, ಕರ್ನಾಟಕದ ಮೊದಲ ಸ್ಮಕಮಲ್ ವಾಲ್-ಇನ್-ವಾಲ್ ಪಕ್ರಿಯೆ ನಡೆಸಿದ ಹೆಗಳಿಕೆಯು ಕೂಡ ನಮ್ಮ ಸಂಸ್ಥೆಗಿದೆ . ಅದರ ಜೊತೆಗೆ ಇನ್ನಷ್ಟು ಸುಧಾರಿತ ತಂತಜ್ಞಾನ T A V R ರೋಗಿಯ ಮೇಲೆ ಪ್ರಯೋಗ ನಡೆಸಿ ಉತ್ತಮ ಫಲಿತಾಂಶ ಲಭಿಸಿದೆ ಎಂದರು .

ವಾಲ್‌-ಇನ್-ವಾಲ್ಟ್ ಟಿಎವಿಆರ್ ರೋಗಿಗಳಿಗೆ ಯಾವ ರೀತಿಯಲ್ಲಿ ಅಳವಡಿಸಲಾಗುತ್ತದೆ ಎನ್ನುವ ಸ್ಪಷ್ಟತೆಯನ್ನು ನೀಡುತ್ತಾ , ಇದು
ತೀವ್ರವಾದ ಆಯೊರ್ಟಿಕ್ ವಾಲ್ವ್ ರೋಗ ಹೊಂದಿರುವ ರೋಗಿಗಳಿಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಮೂಲಕ ವಾಲ್ವ್ ಬದಲಾವಣೆ ಮಾಡಲಾಗುತ್ತದೆ . ಆದರೆ ಸುಮಾರು 10-15 ವರ್ಷಗಳಲ್ಲಿ ಆ ವಾಲ್ವ್ ಗಳು ಕುಗ್ಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಆ ಸಮಯದಲ್ಲಿ ಮತ್ತೆ ವಾಲ್ಟ್ ಬದಲಿಸ ಬೇಕಾಗುತ್ತೆ ಅದಕ್ಕಾಗಿ ಮತ್ತೆ “open-heart surgery” ಅಗತ್ಯವಿರುತ್ತದೆ . ಈ ಸಮಯದಲ್ಲಿ ಇದು ವಯಸ್ಕರೋಗಿಗಳಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಅಂತಹ ಪರಿಸ್ಥಿತಿಯಲ್ಲಿ Valve-in-Valve TAVR ತಂತ್ರಜ್ಞಾನ ಸಹಕಾರಿ ಆಗಲಿದೆ .

ಈಗಾಗಲೇ ಗಂಭೀರ ಅರೋಗ್ಯ ಸಮಸ್ಯೆಯನ್ನು ಹೊಂದಿದ್ದ 72 ಹರೆಯದ ವ್ಯಕ್ತಿ ಮತ್ತು ೮೦ ರ ಹರೆಯದ ಮಹಿಳೆಗೆ ಯಶಸ್ವಿಯಾಗಿ “ವಾಲ್-ಇನ್-ವಾಲ್ವ್ ಪ್ರಕ್ರಿಯೆ ನಡೆಸಲಾಗಿದೆ .ಈ ರೀತಿಯ ತತ್ವದ ಪ್ರತಿ ಬದ್ಧತೆ ತಾಂತ್ರಿಕ ಮೇಲುಗೈ ಯನ್ನು ಸಾಧಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ . ಇಂಡಿಯಾನಾ ಆಸತ್ರೆ ಕಳೆದ ಆರು ವರ್ಷಗಳಿಂದ ಕರ್ನಾಟಕದ ಕರಾವಳಿ, ಉತ್ತರ ಮಲಬಾರ್ ಮತ್ತು ಮಲೆನಾಡು ಪ್ರದೇಶಗಳಿಗೆ ಸುಸ್ಸಜಿತವಾದ ಅರೋಗ್ಯ ಸೇವೆಯನ್ನು ನೀಡುತ್ತಾ ಬಂದಿದೆ .

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಶಿವ ಪ್ರಾಸಾದ್ ಶೆಟ್ಟಿ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!