ಮಂಗಳೂರು: ಸನಾತನ ಧರ್ಮ ಹಾಗೂ ಅಯೋಧ್ಯೆ ರಾಮಮಂದಿರವನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.


ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ, ಮಂಗಳೂರು ಘಟಕದ ವತಿಯಿಂದ ನಗರದ ಕ್ಲಾಕ್ ಟವರ್ ಎದುರು ಪ್ರತಿಭಟನೆ ಆಯೋಜಿಸಲಾಗಿತ್ತು.

ಸಂಸತ್ ಭವನದ ಮುಂಭಾಗದಲ್ಲಿ ಕೇಸರಿ ಬಟ್ಟೆ ಧರಿಸಿ ಸನಾತನ ಧರ್ಮ ಮತ್ತು ಅಯೋಧ್ಯೆ ರಾಮಮಂದಿರವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ, ಸಂಸತ್ ಸದಸ್ಯ ಪಪ್ಪು ಯಾದವ್ ಹಾಗೂ ವಿರೋಧ ಪಕ್ಷಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗಿ, ಘಟನೆಯನ್ನು ಖಂಡಿಸಿದರು. ಸನಾತನ ಧರ್ಮ ಹಾಗೂ ರಾಮಮಂದಿರದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

