ಬದಿಯಡ್ಕದಲ್ಲಿ ಆಟಿ ಅಮಾವಾಸ್ಯೆ ಅಂಗವಾಗಿ ಪಾಲೆ ಮರದ ಕಷಾಯ ವಿತರಣೆ

ಬದಿಯಡ್ಕ: ಆಟಿ ಅಮಾವಾಸ್ಯೆ ಅಂಗವಾಗಿ ಬದಿಯಡ್ಕದ ಶ್ರೀನಿಧಿ ಕ್ಲಿನಿಕ್‌ನಲ್ಲಿ ಪಾಲೆ ಮರದ ಕೆತ್ತೆಯ ಕಷಾಯ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪಿ.ವಿ. ಭಟ್ ಪಟ್ಟಾಜೆ ಪ್ರಾರ್ಥನೆ ಹಾಡಿದರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ವಾಂತಿಚಾಲು ಅವರು ಪಾಲೆ ಮರದ ಕಷಾಯದ ಮಹತ್ವದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು. 350ಕ್ಕೂ ಹೆಚ್ಚು ಮಂದಿ ಪಾಲೆ ಮರದ ಕಷಾಯವನ್ನು ಸ್ವೀಕರಿಸಿದರು.

ಡಾ. ಶ್ರೀನಿಧಿ ಸರಳಾಯ, ಸುಂದರ ಬಾರಡ್ಕ, ಶ್ರೀಷನ್ ಬಾರಡ್ಕ ಹಾಗೂ ದೀಕ್ಷಿತ್ ಬಾರಡ್ಕ ಮೊದಲಾದವರು ಕಷಾಯ ತಯಾರಿಕೆಯ ನೇತೃತ್ವ ವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!