ಮಂಗಳೂರು: ‘ಯಂಗ್ ಡೆಮಾಕ್ರಟಿಕ್’ ಸಂಘಟನೆಯ ಘೋಷಣೆಯ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ರಾಜಕೀಯ ಒತ್ತಡದಿಂದ ಪಾಲಿಕೆ ಹಾಗೂ ಪೊಲೀಸರು ಜಂಟಿಯಾಗಿ ತೆರವುಗೊಳಿಸಿದ್ದಾರೆ ಎಂದು ಮಂಗಳೂರು ನಗರ ಎಸ್‌ಡಿಪಿಐ ಅಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಆರೋಪಿಸಿದ್ದಾರೆ.

ಫ್ಲೆಕ್ಸ್ ತೆರವು ಖಂಡಿಸಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅನ್ವರ್ ಸಾದಾತ್, ಯುವಕರು ಒಂದಾಗುತ್ತಿರುವುದನ್ನು ಕಂಡು ಕೆಲ ರಾಜಕೀಯ ನಾಯಕರು ಅಸಮಾಧಾನಗೊಂಡು ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.

ಎಸ್‌ಡಿಪಿಐ ಹಾಗೂ ‘ಯಂಗ್ ಡೆಮಾಕ್ರಟಿಕ್’ ಸಂಘಟನೆಗಳ ಬ್ಯಾನರ್‌ಗಳನ್ನು ಕಂಡಾಗ ಕೆಲವರ ಕಣ್ಣು ಕೆಂಪಾಗುತ್ತದೆ ಎಂದು ಟೀಕಿಸಿದ ಅವರು, ಈ ಕ್ರಮದ ವಿರುದ್ಧ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದರು.

