ಮೀನುಗಾರಿಕಾ ದೋಣಿಯಿಂದ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಉಳ್ಳಾಲ: ಆ.9 ರಂದು ಮೀನುಗಾರಿಗೆಕೆ ದೋಣಿಯಲ್ಲಿ ತೆರಳುವ ಸಂದರ್ಭ ದೊಡ್ಡ ಗಾತ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದ ಕುಂದಾಪುರ ಮೂಲದ ನಾರಾಯಣ(31) ಮೃತದೇಹ ಉಳ್ಳಾಲದ ಕೋಟೆಪುರ ಅಳಿವೆಬಾಗಿಲಿನಲ್ಲಿ ಇಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಉಳ್ಳಾಲ ಮೂಲದ ಓಷಿಯನ್‌ ಸ್ಟಾರ್‌ ಹೆಸರಿನ ಬೋಟ್‌ ಮಂಗಳೂರಿನ ಧಕ್ಕೆಯಿಂದ ಮೀನುಗಾರಿಕೆಗೆ ತೆರಳುವ ಸಂದರ್ಭ ದೊಡ್ಡ ಗಾತ್ರದ ಅಲೆ ದೋಣಿಗೆ ಬಡಿದು ಕುಂದಾಪುರ ನಿವಾಸಿ ನಾರಾಯಣ (31) ಎಂಬವರು ನಾಪತ್ತೆಯಾಗಿದ್ದರು. ಹೊಸತಾಗಿ ಬೋಟಿಗೆ ಬಂದಿದ್ದ ಅವರು ಸಮುದ್ರದ ಅಲೆಗಳ ನಡುವೆ ಸಿಲುಕಿ ನಾಪತ್ತೆಯಾಗಿದ್ದರು.

ಈ ಕುರಿತು ಕಳೆದ 8 ದಿನಗಳಿಂದ ಬೋಟ್‌ ಮಾಲೀಕರು ಸೇರಿದಂತೆ, ಮನೆಮಂದಿ ಹುಡುಕಾಡುತ್ತಲೇ ಇದ್ದರು. ಮಂಗಳೂರಿನ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿತ್ತು. ಇದೀಗ ಉಳ್ಳಾಲದ ಕೋಟೆಪುರ ಅಳಿವೆಬಾಗಿಲು ಸಮೀಪ ಪತ್ತೆಯಾದ ಮೃತದೇಹ ಅವರದ್ದೇ ಅನ್ನುವುದನ್ನು ಸಹೋದರರು ಗುರುತು ಪತ್ತೆ ಹಚ್ಚಿದ್ದಾರೆ. ವೆನ್ಲಾಕ್‌ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಗಿದೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಯುಡಿಆರ್‌ ಪ್ರಕರಣ ದಾಖಲಿಸಲಾಗಿದೆ.

SHARE
Loading spinner

One thought on “ಮೀನುಗಾರಿಕಾ ದೋಣಿಯಿಂದ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ”

  1. [2268]Rotowirebet login ph | Legit online slots gamit ang Gcash,Mag-rotowirebet login ph na para sa legit online slots gcash. I-download ang apk at alamin ang paano maglaro ng baccarat. Mag-sign up at maglaro na rito! visit: rotowirebet

    Loading spinner

Leave a Reply

Your email address will not be published. Required fields are marked *

error: Content is protected !!