ಕಾಸರಗೋಡು: ಪ್ರಯಾಣಿಕರ ಸಂಚಾರ ದಟ್ಟಣೆ ಹೆಚ್ಚಿರುವ ಕಾಸರಗೋಡು ಜಿಲ್ಲೆಯಲ್ಲಿ ಹಬ್ಬದ ರಜೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ಯಾಸೆಂಜರ್, ಮೆಮು (MEMU) ರೈಲು ಸೇವೆಗಳನ್ನು ಒದಗಿಸಲು ಹಾಗೂ ಪ್ರಸ್ತುತ ಸಂಚರಿಸುತ್ತಿರುವ ವಿವಿಧ ರೈಲುಗಳಿಗೆ ತುರ್ತಾಗಿ ತಾತ್ಕಾಲಿಕ ನಿಲುಗಡೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತಿಳಿಸಿದ್ದಾರೆ.

ಓಣಂ, ಶ್ರೀಕೃಷ್ಣ ಜನ್ಮಾಷ್ಟಮಿ, ವಿನಾಯಕ ಚತುರ್ಥಿ ಮುಂತಾದ ಹಬ್ಬಗಳ ಅಂಗವಾಗಿ ಮುಂಬರುವ ಒಂದು ತಿಂಗಳ ಅವಧಿಯಲ್ಲಿ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನು ಪರಿಗಣಿಸಿ ಹೆಚ್ಚುವರಿ ಪ್ಯಾಸೆಂಜರ್/ಮೆಮು ಸೇವೆಗಳನ್ನು ಮಂಜೂರು ಮಾಡಲು ಮತ್ತು ವಿವಿಧ ರೈಲುಗಳಿಗೆ ತಾತ್ಕಾಲಿಕ ನಿಲುಗಡೆಗಳನ್ನು ನೀಡುವಂತೆ ಒತ್ತಾಯಿಸಲಾಗುತ್ತಿದೆ.

ನೀಡಲಾಗುವ ತಾತ್ಕಾಲಿಕ ನಿಲುಗಡೆಗಳನ್ನು ನಂತರ ಕಾಯಂಗೊಳಿಸಲೂ ಅಗತ್ಯ ಪ್ರಯತ್ನಗಳನ್ನು ನಡೆಸಲಾಗುವುದು. ಶಿಕ್ಷಣ, ಉದ್ಯೋಗ, ವೈದ್ಯಕೀಯ ಚಿಕಿತ್ಸೆ ಮುಂತಾದ ಅಗತ್ಯಗಳಿಗಾಗಿ ಇತರ ಜಿಲ್ಲೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಯಲ್ಲಿ ಕಾಸರಗೋಡು ಜಿಲ್ಲೆಯ ಬಹುಪಾಲು ಜನರಿದ್ದಾರೆ. ಹಬ್ಬದ ರಜೆಗಳು ಆರಂಭವಾಗುವುದರೊಂದಿಗೆ ಪ್ರಯಾಣದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವುದರಿಂದ ಪ್ರಯಾಣಿಕರ ಸಂಕಷ್ಟಗಳಿಗೆ ತುರ್ತು ಪರಿಹಾರ ಕಂಡುಕೊಳ್ಳಬೇಕಾಗಿದೆ.
ಇದರ ಭಾಗವಾಗಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಹಾಗೂ ಬಿಜೆಪಿ ರಾಜ್ಯ, ರಾಷ್ಟ್ರೀಯ ನಾಯಕತ್ವಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅಶ್ವಿನಿ ತಿಳಿಸಿದ್ದಾರೆ.


Yo, 777bd3 is pretty slick! Games are smooth, signup was quick. Definitely worth checking out if you’re looking for some fun. Check it out here: 777bd3
Just grabbed the rr3gameapk. Quick install, easy to play. Not expecting much, but seems decent for a few mins of fun. Here is where i got it: rr3gameapk
Giving ad777game a shot. It’s got a few cool games that caught my eye right away. Could be fun. Try it yourself: ad777game