ಭಟ್ಕಳ -ಸೋಮವಾರ ಬೆಳಿಗ್ಗೆ ಯಿಂದ ನೂರಾರು ಭಕ್ತರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ದರ್ಶನ ಪಡೆದು ಅಲ್ಲಿನ ಪರಿವಾರ ದೇವರಾದ ಗಣಪತಿ ಧರ್ಮಸಾಸ್ಥಾರ ವೀರಭದ್ರ ಮತ್ತು ನಾಗದೇವರು ಮತ್ತು ಜಟಕ ದೇವರಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿನ ಅರ್ಚರು ಅಯೋಧ್ಯಾ ಮೂಲದವರಾದ ಭೀಷ್ಮ ತಿವಾರಿ ನೇತೃತ್ವದಲ್ಲಿ ೧೨.೩೦ ಕ್ಕೆ ನಾಗದೇವರಿಗೆ ಮಹಾಪೂಜೆ ನಡೆದು ಅಮ್ಮನವರಿಗೆ ಮಹಾಪೂಜೆ ನಡೆಯಿತು.

ಈ ಸಂಧರ್ಭದಲ್ಲಿ ಊರು ಹಾಗೂ ಪರೂರಿನ ಭಕ್ತರು ಸೇವೆ ಸಲ್ಲಿಸಿ ಕೃತಾರ್ಥರಾದರು.

