ಸಿಪಿಐ ಹಿರಿಯ ನೇತಾರ ಮಂಜೇಶ್ವರದ ಅಭಿವೃದ್ಧಿಯ ಹರಿಕಾರ ತುಳುನಾಡಿನ ಕಮ್ಯುನಿಸ್ಟ್ ಅಗ್ರಗಣ್ಯ ನೇತಾರ ಮಂಜೇಶ್ವರದ ಮಾಜಿ ಶಾಸಕ ಕಾಂ|| ಎಂ.ರಾಮಪ್ಪ ಮಾಸ್ತರ್ ರವರ ಅನುಸ್ಮರಣಾ ಸಮ್ಮೇಳನ ಮಂಜೇಶ್ವರ ಟಿ.ವಿ ಥೋಮಸ್ ಸ್ಮಾರಕ ಮಂದಿರದಲ್ಲಿ ನಡೆಯಿತು. ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರ್ ಅಧ್ಯಕ್ಷತೆ ವಹಿಸಿದರು.
ಸಿಪಿಐ ರಾಜ್ಯ ಸಹ ಕಾರ್ಯದರ್ಶಿ, ಮಾಜಿ ಕಂದಾಯ ಸಚಿವ, ಹಾಲಿ ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಬಿ.ಕೆ.ಎಂ.ಯು ರಾಜ್ಯ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪ್ಪಿಲ್ ಪ್ರಮುಖ ಭಾಷಣ ಮಾಡಿದರು. ರಾಮಪ್ಪ ಮಾಸ್ಟರ್ ರವರ ಮೊಮ್ಮಗಳು ಶ್ರೀಮತಿ ಸೀಮಾ, ಮಂಡಲ ಸಮಿತಿ ಸದಸ್ಯೆ ನಾರಾಯಣಿ ರಾಜನ್ ಮೊದಲಾದವರು ಉಪಸ್ಥಿತರಿದ್ದರು. ಎಸ್. ರಾಮಚಂದ್ರ ಬಡಾಜೆ ಸ್ವಾಗತಿಸಿ, ಶ್ರೀಧರ್ ಆರ್.ಕೆ ವಂದಿಸಿದರು. ಬೆಳಿಗ್ಗೆ ಅವರ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ನಡೆಯಿತು. ಮುಸ್ತಫಾ ಕಡಂಬಾರ್ ಧ್ವಜಾರೋಹಣಗೈದರು. ಸಿಪಿಐ ಮಂಜೇಶ್ವರ ಮಂಡಲ ಸಹ ಕಾರ್ಯದರ್ಶಿ ಎಸ್. ರಾಮಚಂದ್ರ ಬಡಾಜೆ, ಲೋಕಲ್ ಕಾರ್ಯದರ್ಶಿ ಶ್ರೀಧರ್ ಆರ್.ಕೆ, ಮಂಡಲ ಸಮಿತಿ ಸದಸ್ಯೆ ನಾರಾಯಣಿ ರಾಜನ್, ಎ.ಐ.ವೈ.ಎಫ್ ಮಂಜೇಶ್ವರ ಮಂಡಲ ಕಾರ್ಯದರ್ಶಿ ದಯಾಕರ ಮಾಡ, ಲೋಕಲ್ ಸಮಿತಿ ಸದಸ್ಯರಾದ ರಮೇಶ್ ಉದ್ಯಾವರ, ನಾರಾಯಣ ಕಾಜೂರ್, ಧನುರಾಜ್ ಕೀರ್ತೇಶ್ವರ ಹಾಗೂ ಬ್ರಾಂಚ್ ಕಾರ್ಯದರ್ಶಿಗಳು ಮೊದಲಾದವರು ಉಪಸ್ಥಿತರಿದ್ದರು.