ನಮ್ಮ ಮೀಡಿಯಾ 24×7 ವರದಿಗೆ ಫಲ ಶ್ರುತಿ. ಮಂಜೇಶ್ವರ ಸರ್ವಿಸ್ ರಸ್ತೆ ಬಳಿ ಇದ್ದ ಬಸ್ ನಿಲ್ದಾಣದ ಸಮೀಪವಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ತಡೆ ಬೇಲಿ ನಿರ್ಮಿಸಿದ ವಿದ್ಯುತ್ ಇಲಾಖೆ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದ ಎದುರು ರಾಗಂ ಜಂಕ್ಷನ್ ರಾಷ್ಟ್ರೀಯ ಷಟ್ಪಥ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಬಸ್ ನಿಲ್ದಾಣಕ್ಕೆ ತಾಗಿಕೊಂಡೇ ತಡಬೇಲಿ ಇಲ್ಲದೆ ಸ್ಥಾಪಿಸಲಾಗಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಾರ್ವಜನಿಕರಲ್ಲಿ ಭೀತಿಯ ವಾತಾವರಣಕ್ಕೆ ಕಾರಣವಾಗಿತ್ತು. ಈ ಸುದ್ದಿ ನಮ್ಮ ಮೀಡಿಯಾ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ಬಳಿಕ, ವಿದ್ಯುತ್ ಇಲಾಖೆ ತಕ್ಷಣ ಸ್ಪಂಧಿಸಿ ಶನಿವಾರದಂದು ಬೆಳಿಗ್ಗೆ ತಾತ್ಕಾಲಿಕ ತಡೆಬೇಲಿ ಸ್ಥಾಪಿಸುವ ಕಾರ್ಯದಲ್ಲಿ ತೊಡಗಿದೆ.

ನಮ್ಮ ಮೀಡಿಯಾ ದೃಶ್ಯ ಮಾಧ್ಯಮದಲ್ಲಿ ಈ ಬಗ್ಗೆ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಅಪಾಯವನ್ನು ಅರಿತ ಮೇಲಾಧಿಕಾರಿಗಳು ನೀಡಿದ ಸೂಚನೆಯಲ್ಲಿ ತಕ್ಷಣ ಸೆಕ್ಷನ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತಡೆಬೇಲಿ ಹಾಕುವ ಮೂಲಕ ನಾಗರಿಕರ ಭದ್ರತೆಗೆ ಆದ್ಯತೆ ನೀಡಿದ ಕ್ರಮವನ್ನು ಕೈಗೊಂಡಿದ್ದಾರೆ. ತಾತ್ಕಾಲಿಕ ತಡೆಬೇಲಿ ಹಾಕಿದರೂ, ಶಾಶ್ವತ ಸುರಕ್ಷತೆಗಾಗಿ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಯುತ್ತಿರುವುದಾಗಿಯೂ ತಿಳಿದು ಬಂದಿದೆ.

ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರು ಅಪಾಯಕರ ಪರಿಸ್ಥಿತಿಯನ್ನು ಬೆಳಕಿಗೆ ತಂದ ನಂತರ, ನಾಗರಿಕ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಕ್ತವಾಗಿತ್ತು. ಟ್ರಾನ್ಸ್‌ಫಾರ್ಮರ್ ಬಹುಜನ ಓಡಾಟವಿರುವ ಬಸ್ ನಿಲ್ದಾಣದ ಅಂಗಳದಲ್ಲೇ ಇರುವುದರಿಂದ, ಶಾರ್ಟ್ ಸರ್ಕ್ಯೂಟ್ ಅಥವಾ ತಾತ್ಕಾಲಿಕ ದೋಷಗಳಿಂದ ಸಂಭವಿಸಬಹುದಾದ ಅಪಘಾತದ ಭೀತಿ ಎದುರಾಗಿತ್ತು.

ನಮ್ಮ ಮೀಡಿಯಾದ ಒತ್ತಡ, ಸಾರ್ವಜನಿಕ ಒಗ್ಗಟ್ಟು ಮತ್ತು ನಾಗರಿಕ ಜವಾಬ್ದಾರಿಯ ಪ್ರಭಾವದಿಂದಾಗಿ ಸಮಸ್ಯೆಗೆ ತಡವಾಗಿಯಾದರೂ ವಿದ್ಯುತ್ ಇಲಾಖೆ ವತಿಯಿಂದ ಸ್ಪಂಧನೆ ಉಂಟಾಗಿರುವುದು ಸಾರ್ವಜನಿಕ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.ಸಾರ್ವಜನಿಕ ಸುದೃಢತೆಯ ದೃಷ್ಟಿಯಿಂದ ಇಂತಹ ಸಂದರ್ಭಗಳಲ್ಲಿ ತ್ವರಿತ ಮತ್ತು ಪರಿಣಾಮಕಾರಿಯಾದ ಕ್ರಮ ಅಗತ್ಯ ಎಂಬುದನ್ನು ಈ ಘಟನೆಯ ಬಗ್ಗೆ ಮಾಧ್ಯಮಗಳು ಮತ್ತೊಮ್ಮೆ ಅಧಿಕಾರಿಗಳಿಗೆ ಎಚ್ಚರಿಕೆಯ ಕರೆಗಂಟೆ ನೀಡಿದೆ.


ದೃಶ್ಯ ಮಾಧ್ಯಮದಲ್ಲಿ ಈ ಬಗ್ಗೆ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಅಪಾಯವನ್ನು ಅರಿತ ಮೇಲಾಧಿಕಾರಿಗಳು ನೀಡಿದ ಸೂಚನೆಯಲ್ಲಿ ತಕ್ಷಣ ಸೆಕ್ಷನ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತಡೆಬೇಲಿ ಹಾಕುವ ಮೂಲಕ ನಾಗರಿಕರ ಭದ್ರತೆಗೆ ಆದ್ಯತೆ ನೀಡಿದ ಕ್ರಮವನ್ನು ಕೈಗೊಂಡಿದ್ದಾರೆ. ತಾತ್ಕಾಲಿಕ ತಡೆಬೇಲಿ ಹಾಕಿದರೂ, ಶಾಶ್ವತ ಸುರಕ್ಷತೆಗಾಗಿ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಯುತ್ತಿರುವುದಾಗಿಯೂ ತಿಳಿದು ಬಂದಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!