ಮಂಗಳೂರಿಗೆ ರಾಕಿಂಗ್ ಸ್ಟಾರ್ ಯಶ್ ಆಗಮನ;ಧರ್ಮಸ್ಥಳ ಸೇರಿದಂತೆ ಪ್ರಮುಖ ದೇವಾಲಯಗಳಿಗೆ ಯಶ್ ಭೇಟಿ

ಮಂಗಳೂರು:ರಾಕಿಂಗ್ ಸ್ಟಾರ್ ಯಶ್ ಮಂಗಳೂರಿಗೆ ಆಗಮಿಸಿದ್ದು, ವಿವಿಧ ದೇವಾಲಯಗಳ ಭೇಟಿಗೆ ತೆರಳಿದ್ದಾರೆ.ಯಶ್ ಇಂದು
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಭಿಮಾನಿಗಳು ಅವರಿಗೆ ಸ್ವಾಗತ ಕೋರಿದರು.

ಟಾಕ್ಸಿಕ್ ಸಿನಿಮಾ ಬಿಡುಗಡೆ ಮೊದಲು ಧರ್ಮಸ್ಥಳ ಸೇರಿದಂತೆ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಅವರದ್ದಾಗಿದೆ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಸಿನಿಪ್ರಿಯರಲ್ಲಿ ಹೊಸ ಸಂಚಲನ ಮೂಡಿಸಿದೆ. ‘ಕೆಜಿಎಫ್’ ಸರಣಿಯ ನಂತರ ಯಶ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲಕ್ಕೆ ‘ಟಾಕ್ಸಿಕ್’ ಟೀಸರ್ ಸ್ಪಷ್ಟ ಉತ್ತರ ನೀಡಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!