ಮಂಜೇಶ್ವರ: ವಾಮಂಜೂರು ಚೆಕ್‌ಪೋಸ್ಟ್ ಬಳಿ ಭೀಕರ ಸರಣಿ ಅಪಘಾತ — ಒಬ್ಬನ ದಾರುಣ ಸಾವು ಮತ್ತೊಬ್ಬ ಗಂಭೀರ

ಮಂಜೇಶ್ವರ: ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್ ಸಮೀಪ ಬಾನುವಾರ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಒಬ್ಬ ಸಾವನ್ನಪ್ಪಿ ಜೊತೆಗಿದ್ದವ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ.

ಬೈಕ್‌ನಲ್ಲಿ ಸಂಚರಿಸುತ್ತಿದ್ದ ಪೈವಳಿಕೆ ಅಗರ್ತಿ ಮೂಲೆ ನಿವಾಸಿ ಕಿರಣ್ (34) ಹಾಗೂ ಕೋಡಿಬೈಲು ಬಳಂಕುಡೆ ನಿವಾಸಿ ಹರೀಶ್ (40), ಎಂಬಿವರು ಗಾಯಗೊಂಡಿದ್ದು ಇವರನ್ನು ಮಂಗಳೂರಿನ ವೆನ್ಹಾಕ್ ಆಸತ್ರೆಯಲ್ಲಿ ದಾಖಲಿಸಲಾಗಿದೆ.ಆದರೆ ಇದೀಗ ಚಿಕಿತ್ಸೆಯಲ್ಲಿದ್ದ ಕಿರಣ್ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

ಹರೀಶ್ ಹಾಗೂ ಕಿರಣ್ ಸಂಚರಿಸುತ್ತಿದ್ದ ಬೈಕ್ ಟ್ಯಾಂಕ‌ರ್ ಲಾರಿಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ.
ಈ ವೇಳೆ ಹಿಂಬದಿಯಿ೦ದ ಬ೦ದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಹರೀಶ್ ಹಾಗೂ ಕಿರಣ್‌ ತಲಪ್ಪಾಡಿ ಭಾಗದಿಂದ ಉಪ್ಪಳ ಭಾಗಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

SHARE
Loading spinner

One thought on “ಮಂಜೇಶ್ವರ: ವಾಮಂಜೂರು ಚೆಕ್‌ಪೋಸ್ಟ್ ಬಳಿ ಭೀಕರ ಸರಣಿ ಅಪಘಾತ — ಒಬ್ಬನ ದಾರುಣ ಸಾವು ಮತ್ತೊಬ್ಬ ಗಂಭೀರ”

Leave a Reply

Your email address will not be published. Required fields are marked *

error: Content is protected !!