ಹಳದಿ ಕಾಮಲೆಯಿಂದ ಬಳಲಿ ಮಹಿಳೆ ಸಾವು

ಮಂಜೇಶ್ವರ : ​ಕನಿಯಾಲ ಚಿಮಿಣಿತ್ತಡ್ಕದ ಕೂಲಿ ಕಾರ್ಮಿಕ ಲೋಕೇಶ್ ಅವರ ಪತ್ನಿ ಮಮತಾ (37) ಅವರು ಹಳದಿ ಕಾಮಲೆಯಿಂದ ಸಾವನ್ನಪ್ಪಿದ್ದಾರೆ.

​ಕಳೆದ 15 ದಿನಗಳ ಹಿಂದೆ ಅಸೌಖ್ಯದಿಂದ ಬಳಲುತ್ತಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹಳದಿ ಕಾಮಲೆ ಇರುವುದು ಪತ್ತೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಲಕ್ಕೇರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!