ಮಂಜೇಶ್ವರ : ಮಂಜೇಶ್ವರ ಕಡಂಬಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಕೆ ಎ ಅಬ್ದುಲ್ಲ ಮಾಲಕತ್ವದ ಕೆ ಎ ಬೋರ್ಡ್ ಪ್ಲೈವುಡ್ ಕಾರ್ಖಾನೆಯಲ್ಲಿ ನೌಕರನಾಗಿರುವ ಬಿಹಾರ ಮೂಲದ ಯುವಕನೊಬ್ಬ ಅಲ್ಲೇ ಸಮೀಪವಿರುವ ಕ್ವಾರ್ಟರ್ಸ್ ನಲ್ಲಿ ಸೋಮವಾರ ಸಂಜೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಬಿಹಾರ ನಿವಾಸಿ ಸೂರಜ್ ಸಾವನ್ನಪ್ಪಿದ ಯುವಕನಾಗಿದ್ದಾನೆ. ಈತ 8 ತಿಂಗಳು ಮೊದಲು ಬಿಹಾರದಿಂದ ಕೆಲಸಕ್ಕಾಗಿ ಬಂದಿದ್ದಾನೆನ್ನಲಾಗಿದೆ.
ಜೊತೆಯಾಗಿದ್ದ ಈತನ ಭಾವ ಸೂರಜ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡ ಮೊದಲ ವ್ಯಕ್ತಿಯಾಗಿದ್ದಾನೆ. ಬಳಿಕ ಈತನೇ ಸೂರಜ್ ನನ್ನು ನೇಣಿನಿಂದ ಕೆಳಗಿಳಿಸಿ ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ಸಾಗಿಸಿದರೂ ಜೇವವನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಶವವನ್ನು ಮಂಗಲ್ಪಾಡಿ ಶವಗಾರಕ್ಕೆ ಕೊಂಡೊಯ್ಯಲಾಗಿದೆ. ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ.