ಜೆಇಇ ಅಡ್ವಾನ್ಸ್‌ನಲ್ಲಿ AIR 79: ಮಂಗಳೂರಿನ ವಿಶ್ರುತ್ ಕೃಷ್ಣ ಭಟ್‌ಗೆ ಶಾಸಕ ವೇದವ್ಯಾಸ ಕಾಮತ್ ಅಭಿನಂದನೆ

ಜೆಇಇ ಅಡ್ವಾನ್ಸ್ 2026ರಲ್ಲಿ ಆಲ್ ಇಂಡಿಯಾ(ಎಐಆರ್) 79ನೇ ರ‍್ಯಾಂಕ್ ಮತ್ತು ಜೆಇಇ ಮೈನ್ಸ್ 2026ರಲ್ಲಿ ಆಲ್ ಇಂಡಿಯಾ 335ನೇ ರ‍್ಯಾಂಕ್ ಗಳಿಸಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಂದೂರ್ ವೆಲ್ ನಿವಾಸಿ ಬಿ.ವಿಶ್ರುತ್‌ ಕೃಷ್ಣ ಆರ್.ಭಟ್‌ ಅವರ ಮನೆಗೆ ಶಾಸಕ ವೇದವ್ಯಾಸ ಕಾಮತ್ ರವರು ಭೇಟಿ ನೀಡಿ ಸನ್ಮಾನಿಸಿದರು.

ಸುರತ್ಕಲ್ ಎನ್‌ಐಟಿಕೆ ಯಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಬಡೆಕೈ ರಾಮಚಂದ್ರ ಭಟ್ ಮತ್ತು ಮಂಗಳೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಡಾ.ಪೂರ್ಣಿಮಾ ಆರ್.ಭಟ್ ದಂಪತಿಗಳ ಪುತ್ರನಾಗಿರುವ ಈ ವಿದ್ಯಾರ್ಥಿಯು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಟಾಪ‌ರ್ ಅಲ್ಲದೇ ಕರ್ನಾಟಕದ ಅಗ್ರ 10 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಶೈಕ್ಷಣಿಕವಾಗಿ ಅದ್ಭುತ ಸಾಧನೆಗೈದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ. ಶೈಕ್ಷಣಿಕ ಹಾದಿಯಲ್ಲಿ ಈ ವಿದ್ಯಾರ್ಥಿ ಮಿತ್ರನ ಎಲ್ಲಾ ಕನಸುಗಳು ನನಸಾಗಿ ಭವಿಷ್ಯವು ಇನ್ನಷ್ಟು ಉಜ್ವಲವಾಗಲಿ, ಅವರಿಂದ ಇನ್ನೂ ಹೆಚ್ಚಿನ ಸಾಧನೆಗಳು ಹೊರಹೊಮ್ಮವ ಮೂಲಕ ಜಿಲ್ಲೆಯ-ನಾಡಿನ ಕೀರ್ತಿ ಹೆಚ್ಚಲಿ ಎಂದು ಶುಭ ಹಾರೈಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!