ಧರ್ಮತ್ತಡ್ಕ ಶಾಲೆಯಲ್ಲಿ ರಂಜಿಸಿದ ಗಮಕ ವಾಚನ-ವ್ಯಾಖ್ಯಾನ.

ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ,ಕೇರಳ ಗಡಿನಾಡ ಘಟಕ ,ಕಾಸರಗೋಡು ಮತ್ತು ಸಿರಿಗನ್ನಡ ವೇದಿಕೆ ಬೆಂಗಳೂರು ಕೇರಳ ಗಡಿನಾಡ ಘಟಕ ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ”ಗಮಕ ವಾಚನ -ವ್ಯಾಖ್ಯಾನ ಕಾರ್ಯಕ್ರಮ”ವು ” ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆ, ಧರ್ಮತ್ತಡ್ಕದಲ್ಲಿ ಇಂದು ನಡೆಯಿತು.

ಗಮಕ ಪರಿಷತ್ತು ನಡೆದು ಬಂದ ಬಗೆ -ಮಹತ್ವ, ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ನಿವೃತ್ತ ಅಧ್ಯಾಪಕ, ಸಾಹಿತಿಯಾದಂತಹ ” ಶ್ರೀ.ವಿ ಬಿ ಕುಳಮರ್ವ “ನುಡಿದರು.ಶಾಲಾ ವ್ಯವಸ್ಥಾಪಕ ,ಶಿಕ್ಷಕರಾದ “ಶ್ರೀ ಶಂಕರನಾರಾಯಣ ಭಟ್, ಯನ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ಭಂಡಾರಿ, ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್, ಯನ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಚೂಡಾಮಣಿ ಎಂಬ ಕಾವ್ಯಭಾಗವನ್ನು ನಿವೃತ್ತ ಪ್ರಾಂಶುಪಾಲ, ಗಮಕಿಯೂ ಆಗಿರುವಂತಹ ಡಾ.ಶಶಿರಾಜ ನೀಲಂಗಳ ಇವರು ವಾಚಿಸಿದರು, ಶ್ರೀಮತಿ ಜಯಲಕ್ಷ್ಮೀ ಕಾರಂತ, ಮಂಗಲ್ಪಾಡಿ ವ್ಯಾಖ್ಯಾನಿಸಿದರು.ಪ್ರೊ,ಪಿ.ಯನ್ ಮೂಡಿತ್ತಾಯ, ಶ್ರೀಮತಿ ಲಲಿತಾ ಲಕ್ಷ್ಮಿ ಕುಳಮರ್ವ , ಶಾಲಾ ಅಧ್ಯಾಪಕ- ಅಧ್ಯಾಪಿಕೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕುಮಾರಿ ಅಪರ್ಣ, ನವ್ಯ, ಸಾತ್ವಿಕ ಗಮಕದ ಪ್ರಾರ್ಥನಾ ಗೀತೆಯನ್ನು ಹಾಡಿದರು.ಕುಮಾರಿ ಶ್ರಾವ್ಯ ನಿರೂಪಿಸಿ, ಆದರ್ಶ ನಾರಾಯಣ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!