ಇಂದಿನ ರಾಜ್ಯ ಹವಾಮಾನ ಮುನ್ಸೂಚನೆ

ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ದುರ್ಬಲ ಅಸ್ಥಿರವಾದ ಗಾಳಿಯ ಬೀಸುವಿಕೆ ಹಾಗೂ ಕಡಿಮೆ ತೇವಾoಶದ ಮೋಡದ ಕಾರಣ ವಾಯುಭಾರಕುಸಿತದ ಪ್ರಭಾವದ ಮಳೆ ಕೈಕೊಡುವ ಸಾಧ್ಯತೆಗಳಿವೆ

ಕರಾವಳಿಯ ದ.ಕ. ಕಾಸರಗೋಡಿನ ಅಲ್ಲಲ್ಲಿ ನಿನ್ನೆ ಮಧ್ಯಾಹ್ನ ರಾತ್ರಿ ಮತ್ತು ಇವತ್ತು ಬೆಳಿಗ್ಗೆ ಸಾಮಾನ್ಯ ಮಳೆಯಾಗಿದೆ.
ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದ್ದು ಮಂಡ್ಯ ಮೈಸೂರು ಚಾಮರಾಜನಗರ ಬೆಳಗಾವಿ ಬಾಗಲಕೋಟೆ ಬಿಜಾಪುರ ಜಿಲ್ಲೆಗಳ ಹಲವು ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಗ್ರಾಮದಲ್ಲಿ 150mm ಗರಿಷ್ಠ ಮಳೆಯಾಗಿತ್ತು.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಭಾಗಷಃ ಮೋಡ – ಬಿಸಿಲಿನ ವಾತಾವರಣ ಮುಂದುವರೆಯಲಿದ್ದು ಕಾಸರಗೋಡು ಜಿಲ್ಲೆಯ ಅಲ್ಲಲ್ಲಿ, ದ.ಕ.ದ ಮಂಗಳೂರು ಉಳ್ಳಾಲ ಬಂಟ್ವಾಳ ಪುತ್ತೂರು ಸುಳ್ಯ ಹಗಲು ಪಶ್ಚಿಮದ ಮೋಡದಿಂದ ಆಗಾಗ ತುಂತುರು – ಸಣ್ಣ ಮಳೆಯಾಗುವ ಮುನ್ಸೂಚನೆ ಇದೆ. ಉಡುಪಿ ಉ.ಕ ಜಿಲ್ಲೆಗಳ ಘಟ್ಟಪ್ರದೇಶಗಳ ಅಲ್ಲಲ್ಲಿ ಸಂಜೆ ಗುಡುಗು ಮಳೆಯಾಗಬಹುದು. ಸೆಪ್ಟೆಂಬರ್ ಮಳೆ ಕರಾವಳಿ ಮಟ್ಟಿಗೆ ನಿರಾಶಾದಾಯಕವಾಗುವ ಸಾಧ್ಯತೆಗಳಿವೆ. ಸೆ 25 ರ ನಂತರ ಪೂರ್ತಿ ಕಡಿಮೆ ಆಗಬಹುದು.

ಮಲೆನಾಡಿನ ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು – ಸಣ್ಣ ಮಳೆಯ ಮುನ್ಸೂಚನೆ ಇದೆ. ಮಳೆ ಕೊರತೆಯಾಗುವ ಸಾಧ್ಯತೆ ಇರುವ ಕಾರಣ ಸೆ 25 ರ ನಂತರ ಮಳೆ ಪೂರ್ತಿ ಕಡಿಮೆ ಆಗಬಹುದು.

ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು – ಗ್ರಾಮಾಂತರ ಚಾಮರಾಜನಗರ ರಾಮನಗರ ಮೈಸೂರು ಮಂಡ್ಯ ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಸಂಜೆಯ ನಂತರ ತುಂತುರು -ಸಾಧಾರಣ ಮಳೆಯ ಮುನ್ಸೂಚನೆ ಇದೆ. ಈ ಜಿಲ್ಲೆಗಳಲ್ಲಿ 2-3 ದಿನ ಮಳೆ ಮುಂದುವರಿಯಲಿದ್ದು 25 ರಿಂದ ಮಳೆ ಕಡಿಮೆ ಆಗಲಿದೆ.

ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಇವತ್ತು ಮೋಡ- ಸಾಧಾರಣ ಮಳೆ ಬರುವ ಮುನ್ಸೂಚನೆ ಇದೆ. ಕಲ್ಬುರ್ಗಿ ಬೀದರ್ ಬೆಳಗಾವಿ ಧಾರವಾಡ ಗದಗ ಹಾವೇರಿ ಬಾಗಲಕೋಟೆ ಬಿಜಾಪುರ ಯಾದಗಿರಿ ರಾಯಚೂರು ಬಳ್ಳಾರಿ ಕೊಪ್ಪಳ ಜಿಲ್ಲೆಗಳಲ್ಲಿ ತುಂತುರು – ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡಿನಲ್ಲಿ ಮುಂದಿನ 3 ದಿನ ಉತ್ತಮ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಸೆ 25 ರಿಂದ ಮಳೆ ಕಡಿಮೆ ಆಗಬಹುದು.

ಮಧ್ಯ ಬಂಗಾಳಕೊಲ್ಲಿಯ ಲೋ ಪ್ರೆಷರ್ ಆಗಲಿದ್ದು ಇದು ಸೆ 23ಕ್ಕೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಮೂಲಕ ಭೂಭಾಗ ಪ್ರವೇಶಿಸುವ ಸಾಧ್ಯತೆ ಇದೆ. ನಂತರ ದುರ್ಬಲ ಆಗುವ ಸಾಧ್ಯತೆ ಇರುವುದರಿಂದ ಸೆ 25 ರ ನಂತರ ರಾಜ್ಯದಲ್ಲಿ ಮಳೆ ಪೂರ್ತಿ ಕಡಿಮೆ ಆಗಬಬಹುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!