ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಅದರ ಅಂಗ ಸಂಸ್ಥೆಯಾದ ಕ್ರೈಸ್ಟ್ ಇಂಕ್ಯುಬೇಷನ್ ಅಂಡ್ ಕನ್ಸಲ್ಟೆನ್ಸಿ ಫೌಂಡೇಶನ್ (CICF) ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಜೊತೆ ಕನ್ಸಲ್ಟೆನ್ಸಿ ಒಪ್ಪಂದ (MOU) ಮಾಡಿಕೊಳ್ಳಲಿದ್ದು ಈ ಕಾರ್ಯಕ್ರಮವು
ನಗರದ ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ ಏಪ್ರಿಲ್ 25ರಂದು ಮುಂಜಾನೆ 10.30 ರಿಂದ ನಡೆಯಲಿದೆ ಎಂದು ಸಹ್ಯಾದ್ರಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಎಸ್. ಎಸ್. ಇಂಜಗಾನೇರಿ ತಿಳಿಸಿದರು .
ಅವರು ನಗರದ ಪತ್ರಿಕಾಭವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಶೈಕ್ಷಣಿಕ ವರ್ಷ 2026-27ನೇ ಸಾಲಿನಿಂದ ಹೊಸ ಕೋರ್ಸ್‌ಗಳಾದ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ (BBA) , ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (BCA) ,
ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (MCA) ಶುರುವಾಗಲಿದೆ ಎಂದರು .
ಈ ಒಪ್ಪಂದದ ಸಹಿ ಕಾರ್ಯಕ್ರಮವನ್ನು ಸಹ್ಯಾದ್ರಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಎಸ್. ಎಸ್. ಇಂಜಗಾನೇರಿ ಮತ್ತು ಎಂ.ಬಿ.ಎ ನಿರ್ದೇಶಕ ಡಾ. ವಿಶಾಲ್ ಸಮರ್ಥ ಅವರೊಂದಿಗೆ ಹಿರಿಯ ಆಡಳಿತ ಮತ್ತು ಶೈಕ್ಷಣಿಕ ನಾಯಕರು ನಡೆಸಲಿದ್ದಾರೆ. ಕ್ರೈಸ್ಟ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಅನಿಲ್ ಪಿಂಟೋ ಮತ್ತು ಬಿಸಿನೆಸ್ ಮತ್ತು ಮ್ಯಾನೇಜ್ಮೆಂಟ್ ಶಾಲೆಯ ಮುಖ್ಯಸ್ಥ ಡಾ. ಶ್ರೀನಿವಾಸ್ ಕೆ. ಭಾಗವಹಿಸಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ.ಎ ಕಾರ್ಯಕ್ರಮದ ನಿರ್ದೇಶಕರಾದ ಡಾ. ವಿಶಾಲ್ ಸಮರ್ಥ, ಅಕಾಡೆಮಿಕ್ಸ್ ಡೀನ್ ಡಾ. ಶಮಂತ್ ರೈ, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಮುಸ್ತಫಾ ಬಸ್ತಿಕೋಡಿ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಡಾ. ಅನುಷ್ ಬೇಕಲ್ ಉಪಸ್ಥಿತರಿದ್ದರು