ಬಂಟ್ವಾಳ: ‘ಗೋಸನ್ಮಾನ್ ಅಭಿಯಾನ’ದ ಅಂಗವಾಗಿ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಮಠದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಅಭಿಯಾನದ ಅಂಗವಾಗಿ ಮಠಕ್ಕೆ ಭೇಟಿ ನೀಡಿದ ಪ್ರಮುಖರು ಪರಮಪೂಜ್ಯ ಶ್ರೀಗಳ ದಿವ್ಯ ಆಶೀರ್ವಾದ ಪಡೆದರು. ಬಳಿಕ ಬಂಟ್ವಾಳ ತಾಲೂಕು ಪ್ರಭಾರಿ ಸಚಿನ್ ಮೇಲ್ಕಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ಅಶೋಕ್ ಇಳಂತಿಲ ಅವರ ಉಪಸ್ಥಿತಿಯಲ್ಲಿ ಸಹಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗೋಸನ್ಮಾನ್ ಅಭಿಯಾನದ ತಾಲೂಕು ಮಠ-ಮಂದಿರಗಳ ಪ್ರಮುಖರಾದ ಶಿವಾನಂದ ಶೆಟ್ಟಿ, ರಮೇಶ್ ರಾವ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

