
ಮಂಗಳೂರು: ‘ದೇಶ ಮೊದಲು’ ಎಂಬ ಧ್ಯೇಯದೊಂದಿಗೆ ಮಂಗಳೂರಿನಲ್ಲಿ ‘ಭಾರತೀಯ ಹಿಟ್ ಜನತಾ ಪಾರ್ಟಿ’ ಸ್ಥಾಪಿಸಲಾಗಿದೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಣೇಶ್ ಶೆಣೈ ಎಂ. ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ರಾಜೀನಾಮೆ ನೀಡಿ ನೂತನ ಪಕ್ಷ ಸ್ಥಾಪಿಸಿದ್ದು, ಶೀಘ್ರದಲ್ಲೇ ನೋಂದಣಿ ಮಾಡಲಾಗುವುದು ಎಂದರು. ಪಕ್ಷವು ಸಂವಿಧಾನಕ್ಕೆ ನಿಷ್ಠವಾಗಿದ್ದು, ಆರಂಭಿಕವಾಗಿ 80 ಮಂದಿ ಸದಸ್ಯತ್ವ ಪಡೆದಿದ್ದಾರೆ. ಕನಿಷ್ಠ ₹2 ಸದಸ್ಯತ್ವ ಶುಲ್ಕ ನಿಗದಿಪಡಿಸಲಾಗಿದೆ. ‘ದೇಶ ಮೊದಲು, ಧರ್ಮ, ಜಾತಿ, ಪಕ್ಷ ನಂತರ’ ಎಂಬುದು ಪಕ್ಷದ ಧ್ಯೇಯವಾಗಿದ್ದು, ಮೊಬೈಲ್ ಚಾರ್ಜರ್ ಪಕ್ಷದ ಚಿಹ್ನೆಯಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ನಳಿನಿ ರೈ ಉಪಸ್ಥಿತರಿದ್ದರು.


