ಕಾರ್ತಿಕ್ ಮೆರ್ಲ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ದಂಡ ವಿಧಿಸಿದ ಮಾನ್ಯ ನ್ಯಾಯಾಲಯ

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಪ್ಯ ಎಂಬಲ್ಲಿ ದಿನಾಂಕ.03.09.2019 ರಂದು ಕಾರ್ತಿಕ್ ಮೆರ್ಲ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದಾಖಲಾಗಿದ್ದ ಅ. ಕ್ರ. 107/2019, ಕಲಂ: 504,341,302, 212 ಐಪಿಸಿ ಪ್ರಕರಣದ ತನಿಖೆ ನಡೆಸಿದ ಆಗಿ ಪ್ರಕರಣದ ತನಿಖಾಧಿಕಾರಿಗಳು ಹಾಗೂ ಪೊಲೀಸ್ ನಿರೀಕ್ಷಕರಾಗಿದ್ದ ನಾಗೇಶ್ ಕದ್ರಿರವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ, ಪ್ರೀತು @ ಪ್ರೀತೇಶ್ ಸುಲಾಯ, ಚರಣ್, ಕಿರಣ್ @ ಮಣಿ ಹಾಗೂ ಸಂತು @ಸ್ಟಿವನ್ ಮಾಂತೇರೋ ಎಂಬವರುಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.

ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ 5 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಯ್ಕ್ ರವರು ಪ್ರೀತು @ ಪ್ರೀತೇಶ್ ಸುಲಾಯ ಹಾಗೂ ಕಿರಣ್ @ ಮಣಿ ಎಂಬವರುಗಳ ವಿರುದ್ಧ ಆರೊಪಿಗಳು ಸಾಬೀತಾದ ಹಿನ್ನೆಲೆಯಲ್ಲಿ 302 ಐಪಿಸಿ ಯಲ್ಲಿ ಜೀವಾವಧಿ ಶಿಕ್ಷೆ, 3 ಲಕ್ಷ ದಂಡ.341 ಐಪಿಸಿ ರಲ್ಲಿ 3 ತಿಂಗಳು ಸದಾ ಶಿಕ್ಷೆ, 500 ದಂಡ, ವಿಧಿಸಿರುತ್ತದೆ.

ಸಂತು @ ಸ್ಟಿವನ್ ಮಾಂತೇರೋನನ್ನು ನೀರ್ದೋಷಿ ಎಂದು ತೀರ್ಪು ನೀಡಿದ್ದು, ಮತ್ತೋರ್ವ ಚರಣ್ ಎಂಬಾತನು ಈಗಾಗಲೇ ಮೃತಪಟ್ಟಿರುತ್ತಾನೆ.

ಸರ್ಕಾರಿ ಅಭಿಯೋಜಕರಾಗಿ ಜಯಂತಿ ಕೆ, ರವರು ಮಾನ್ಯ‌ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿರುತ್ತಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!